ಕೊಪ್ಪಳ ತಾಲೂಕ ಕೆಡಿಪಿ ಸದಸ್ಯರ ನೇಮಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11- ಜಿಲ್ಲೆಯ ಕೊಪ್ಪಳ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿಗೆ ನಾಮ ನಿರ್ದೇಶನ ಮಾಡಿ ಸರ್ಕಾರದ ಯೋಜನಾ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಶಿಪಾರಸ್ತಿನ ಮೆರೆಗೆ ನಾಮ ನಿರ್ದೇಶನ ಮಾಡಿದ್ದು,
ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದ ಪರಿಶಿಷ್ಟಜಾತಿಯ ಜಾತಿಸಂಜೀವಪ್ಪ ಶಿವರಾಮಪ್ಪ ಕಡೆಮನಿ, ಹಿಂದುಳಿದ ವರ್ಗದ ಹಟ್ಟಿ ಗ್ರಾಮದ ತೋಟಪ್ಪ ಮುದಕಪ್ಪ ಸಿಂಟ್ರ ಹಾಗೂ ಮಹಿಳಾ ಕೊಟಾದಡಿ ಶ್ರೀಮತಿ ನಾಗರತ್ನ ಪೂಜಾರ, ಹುಲಗಿ ಮತ್ತು ಅಲ್ಪಸಂಖ್ಯಾತರ ಸಾಧಿಕ ಮಹೆಬೂಬ, ಮುನಿರಾಬಾದ್.
ಸಾಮಾನ್ಯ ಯಲ್ಲನಗೌಡ ಮಲ್ಲನಗೌಡ ಮಾಲಿಪಾಟೀಲ್, ಕಾತರಕಿ ಗೊಡ್ಡನೂರು ಮತ್ತು ನಾಗರಾಜ ಬಸಪ್ಪ ಚಳ್ಕೊಳ್ಳಿ ಗಿಣಗೇರಾ.ಇವರನ್ನು ನೇಮಕ ಮಾಡಿ ಮುಂದಿನ ಆದೇಶದ ವರೆಗೆ ನಾಮ ನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

