
ಸಿಎಂ ಆಗಲು ಅರ್ಹತೆ ಬೇಕು
ಪ್ರೀಯಾಂಕ ಖರ್ಗೆಗೆ – ಹೆಚ್.ಕೆ. ಪಾಟೀಲ್ ಟಾಂಗ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 04- ಸಿಎಂ ಆಗೋದು ಆಸೆ ಪಟ್ಟು ತೆಗೆದುಕೊಳ್ಳೋದಲ್ಲ.ಅದಕ್ಕೆ ಯೋಗ್ಯತೆ – ಅರ್ಹತೆ ಬೇಕು ಎಂದು ಸಂಸದೀಯ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಅವರು ಕೊಪ್ಪಳದಲ್ಲಿ ಮಾತನಾಡಿ ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿ ಇಲ್ಲ ಎಂದ ಇವರು .ಪ್ರೀಯಾಂಕ ಖರ್ಗೆ ಅವರ ಸಿ ಎಂ ಆಸೆಗೆ ಪರೋಕ್ಷವಾಗಿ ಟಾಂಗ ನೀಡಿದರು.
ನಾನೂ ಸಿಎಂ ಆಗಲು ರೆಡಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರ ಪ್ರಶ್ನೇಗೆ ಹೈಕಮಾಂಡ್ ಯಾರಿಗೆ ಅವಕಾಶ ಕೊಡುತ್ತಾರೆ, ಜನರು ಯಾರಿಗೆ ಅಶೀರ್ವಾದ ಮಾಡುತ್ತಾರೋ ಅವರು ಸಿಎಂ ಆಗುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲಾ ಅದೆಲ್ಲಾ ಮಾಧ್ಯಮದ ಸೃಷ್ಠಿ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.ನನಗೆ ಬ್ರೇಕ್ ಫಾಸ್ಟ್ ಮೀಟಿಂಗ್‌ಗೆ ಆಹ್ವಾನವಿರಲಿಲ್ಲಾ ಏಕೆಂದರೆ ನಾನು ಗದಗ ನಲ್ಲಿದ್ದೆ.ನಿನ್ನೆ ಸಿಎಂ ಇಲ್ಲೇ ಇದ್ದರು.ಸಿಎಂ ಹುದ್ದೆಗೆ ಖಾಲಿ ಇದ್ದರೆ ರೇಸ್ ಇರುತ್ತದೆ. ಸಿಎಂ ಹುದ್ದೆ ಖಾಲಿ ಇಲ್ಲ ಎಂದರು