IMG-20260901-WA0015

ಬಣಜಿಗ ಸಮಾಜದ ಹಿರಿಯರಾದ
ಬಸವರಾಜ ತಂಬ್ರಳ್ಳಿ ನಿಧನ

ಕರುನಾಡ ಬೆಳಗು ಸುದ್ದಿ 
ಕೊಪ್ಪಳ,01-  ಬಣಜಿಗ ಸಮಾಜದ ಹಿರಿಯರು ಹಾಗೂ ಸಮಾಜಮುಖಿ ವ್ಯಕ್ತಿಯಾಗಿದ್ದ ನಗರದ ಬಸವರಾಜ ಚನ್ನಬಸಪ್ಪ ತಂಬ್ರಳ್ಳಿ( 76) ಅವರು ಮಂಗಳವಾರ ನಿಧನರಾದರು.
ಕೊಪ್ಪಳನಗರದ ಹಳೆ ಜಿಲ್ಲಾ ಆಸ್ಪತ್ರೆಯ ಹಿಂಭಾಗ, ಎಲ್‌ಐಸಿ ಕಚೇರಿ ಸಮೀಪದ ನಿವಾಸಿಯಾದ ಮೃತರು ಇಬ್ಬರು ಸಹೋದರರು, ಸಹೋದರಿ, ಪುತ್ರ, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
‎ಮೃತರ ಅಂತ್ಯಕ್ರಿಯೆಯನ್ನು ಸೆ.2ರಂದು ಸಂಜೆ 4 ಗಂಟೆಗೆ ಕೊಪ್ಪಳದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತರ ಅಗಲಿಕೆಗೆ ಕುಟುಂಬಸ್ಥರು, ಬಂಧುಗಳು ಹಾಗೂ ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!