
ಕ್ವಾರಿಯಲ್ಲಿ ಮುಳುಗಿ
ವಿದ್ಯಾರ್ಥಿ ಪ್ರದೀಪ್ ಸಾವು
ಕರುನಾಡ ಬೆಳಗು ಸುದ್ದಿ
ಕುಕನೂರ 1೬- ಪಟ್ಟಣದ ಗುದ್ನೆಪ್ಪನಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದಾನೆ.
ಪ್ರದೀಪ್ ಕಂಟ್ಟೆಪ್ಪ ಚೋರಿ(15) ಮೃತ ವಿದ್ಯಾರ್ಥಿ ಕುಷ್ಟಗಿ ಪಟ್ಟಣದ ಹಳೆ ಬಜಾರ್ ದುರ್ಗಾದೇವಿ ಕಾಲೋನಿ ನಿವಾಸಿ ಪ್ರದೀಪ್ ಕುಕುನೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಅಭ್ಯಾಸಸುತ್ತಿದ್ದ ಭಾನುವಾರ ರಜೆ ಇರುವುದರಿಂದ ವಸತಿ ಶಾಲೆಯಿಂದ ತನ್ನ ಸ್ನೇಹಿತರೊಂದಿಗೆ ಪಕ್ಕದ ವರ್ಣಿ ಕರ್ ಕಲ್ಲು ಕ್ವಾರಿಯಲ್ಲಿದ್ದ ನೀರಿನಲ್ಲಿ ಈಜಲು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪಿಎಸ್ಐ ಟಿ. ಗುರುರಾಜ ನೇತೃತ್ವದಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹೊರಗಡೆ ತೆಗೆದಿದ್ದಾರೆ. ಕುಕನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸುರೇಶ್ ಕೋಕರೆ ತಿಳಿಸಿದ್ದಾರೆ.