40c447eb-fa62-49be-86e2-0cb72cb44333

ಸಡಗರದಿಂದ ಸಂಕ್ರಾಂತಿ ಹಬ್ಬ ಆಚರಣೆ
ಧಾನ್ಯದ ರಾಶಿಗಳಿಗೆ ವಿಶೇಷ ಪೂಜೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 16-  ಸಂಕ್ರಾಂತಿ ಹಬ್ಬ ಅಂದರೆ, ಗ್ರಾಮೀಣ ಭಾಗಗಳಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.

ವರ್ಷ ದುದ್ದಕ್ಕೂ ಹೊಲಗಳಲ್ಲಿ ಬೆವರು ಸೋರಿಸಿ ಕಷ್ಟಪಟ್ಟು ಬೆಳೆಸಿದ ಧಾನ್ಯಗಳು ಮನೆಗೆ ಸೇರುವ ಮಾಸ ಮಾರ್ಗಸಿರ ಪುಷ್ಯ ಬಳ್ಳಾರಿ ಗ್ರಾಮೀಣ ಭಾಗದಲ್ಲಿ ಹಲವಾರು ಗ್ರಾಮಗಳಲ್ಲಿ ರೈತ ಬಾಂಧವರು, ತಮ್ಮ ಹೊಲ ಗದ್ದೆಗಳಿಗೆ, ತಮಗೆ ಸಹಕಾರಿಯಾಗುವ ಎತ್ತುಗಳಿಗೆ ವಿಶೇಷ ಪೂಜೆಯನ್ನು ಮಾಡಲಾಯಿತು.                                  ಹೊಲಗದ್ದೆಗಳಲ್ಲಿ ರಾಶಿಗಟ್ಟಲೆ ಹಾಕಿರುವ ಮೆಕ್ಕೆಜೋಳ, ನೆಲ್ಲು, ಮೆಣಸಿನಕಾಯಿ ಧಾನ್ಯದ ರಾಶಿಗಳಿಗೆ ಪೂಜೆ ಮಾಡಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು, ಸಂಗನಕಲ್ಲು ಕೃಷ್ಣಪ್ಪ ಅವರು, ಇಂದು ತಮ್ಮ ಗ್ರಾಮವಾದ ಸಂಗನಕಲ್ಲು ನಲ್ಲಿ ರೈತ ಬಾಂಧವರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು ಹೇಳುತ್ತಾ, ಧಾನ್ಯದ ರಾಶಿಗಳಿಗೆ ವಿಶೇಷ ಪೂಜೆ ಮಾಡಿದರು.

ಈ ಸಂದರ್ಭ ಆಗಿ ಅವರು ಮಾತನಾಡುತ್ತಾ. ರೈತರು ಈ ಭಾಗದಲ್ಲಿ ಈ ವರ್ಷ ಬೆಳೆಸಿದ ಬೆಳೆಗಳು ಉತ್ತಮ ರೀತಿಯಲ್ಲಿ ಫಲಾ ಸಿಕ್ಕಿದೆ ಎಂದರು. ರೈತರು ಕಷ್ಟಪಟ್ಟು ಧಾನ್ಯ ಬೆಳೆಸಿದರೆ ಎಲ್ಲರಿಗೂ ಅನ್ನ ಸಿಗುತ್ತದೆ ಎಂದು, ರೈತರು ಸುಖವಾಗಿದ್ದರೆ ದೇಶದಲ್ಲಿ ಎಲ್ಲರೂ ಸುಖವಾಗಿರುತ್ತಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!