IMG-20231202-WA0038

 ಗಂಗಾವತಿಯ ಹುಸೇನ್ ಸಾಬ್ ಮೇಲೆ ಹಲ್ಲೆ ಪ್ರಕರಣ

ಕಾನೂನು ಕ್ರಮಕ್ಕೆ ಆಗ್ರಹ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ,02-  ಜಿಲ್ಲೆಯ ಗಂಗಾವತಿಯ ಹುಸೇನ್ ಸಾಬ್ ಮೇಲೆ ಹಲ್ಲೆ. ಗಡ್ಡಕ್ಕೆ ಬೆಂಕಿ ಹಚ್ಚಿ. ಹಣ ದೋಚಿ ಜೈ ಶ್ರೀರಾಮ್ ಎನ್ನುವಂತೆ ಬಲವಂತ ಪಡಿಸಿ ಅವಮಾನ ಮಾಡಿದ ಯುವಕರಿಗೆ ಶೀಘ್ರ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಎಸ್.ವಂಟಿಗೋಡಿ ಅವರಿಗೆ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಿದರು.
ಗಂಗಾವತಿಯ ಮಹೆಬೂಬ್ ನಗರದ ನಿವಾಸಿಯಾದ ಹುಸೇನ್ ಸಾಬ್ ವಯಸ್ಸು 65. ಅವರು ಹೋದ ನವೆಂಬರ್ 25ರಂದು ಮಧ್ಯರಾತ್ರಿ ಹೊಸಪೇಟೆಯಿಂದ ಗಂಗಾವತಿಗೆ ಬಂದು ಇಳಿದು ನಿಲ್ದಾಣದ ಬಳಿ ಆಟೋಗಾಗಿ ಕಾಯುತ್ತಿದ್ದಾಗ ಬಂದ ಯುವಕರು ಎಲ್ಲಿಗೆ ಹೋಗುತ್ತಿದ್ದೀಯಾ ? ಎಂದು ಪ್ರಶ್ನಿಸಿ ಬಲವಂತವಾಗಿ ಸ್ಕೂಟಿ ಮೇಲೆ ಕೂಡಿಸಿಕೊಂಡು ಪಂಪಸಾಗರದ ಬಳಿಯ ರೈಲ್ವೆ ಸೇತುವೆ ಕೆಳಗೆ ಜೈ ಶ್ರೀ ರಾಮ್ ಎನ್ನುವಂತೆ ಒತ್ತಾಯಿಸಿ.ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ. ಕೊಲೆ ಬೆದರಿಕೆ ಹಾಕಿ ಅವರಲ್ಲಿದ್ದ ಹಣವನ್ನು ಕಿತ್ತುಕೊಂಡು.ಅವರ ಗಡ್ಡಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಳಗಿನ ಜಾವ ಕುರಿ ಕಾಯುವವರು ಅವರನ್ನು ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.ತಲೆ ಕೆಟ್ಟ ಕೋಮುವಾದಿ ಯುವಕರು ಹಿರಿಯರಿಗೆ ಅಪಮಾನ ಮಾಡಿರುವುದು ಅತ್ಯಂತ ಅಮಾನವೀಯ ಪ್ರಸಂಗ.
ಈ ಯುವಕರು ಯಾವ ಕಲ್ಪನೆಯ ಪ್ರಪಂಚದಲ್ಲಿ ಬದುಕುತ್ತಿದ್ದಾರೆ ? ಇವರನ್ನು ಸುಮ್ಮನೆ ಬಿಟ್ಟರೆ ಹಿಂದೂ ಮುಸ್ಲಿಂ ಗಲಭೆಯನ್ನು ಹುಟ್ಟು ಹಾಕಿ ಅಶಾಂತಿಯನ್ನು ಕದಡುತ್ತಾರೆ. ಅಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ತಕ್ಷಣ ಇವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮನ್ನು ವಿನಂತಿಸುತ್ತೇವೆ. ತಕ್ಷಣ ಕ್ರಮ ಜರುಗದಿದ್ದರೆ ವಿವಿಧ ರೂಪದ ಹೋರಾಟ. ಧರಣಿ ಸತ್ಯಾಗ್ರಹವನ್ನು ಮಾಡಬೇಕಾಗುತ್ತದೆ.
ಇದೊಂದು ಬಹುದೊಡ್ಡ ಸೂಕ್ಷ್ಮ ವಿಷಯ.

ವತಕ್ಷಣ ಕ್ರಮಕ್ಕೆ ಮತ್ತೊಮ್ಮೆ ತಮ್ಮಲ್ಲಿ ಕಳಕಳಿಯ ವಿನಂತಿ ಮಾಡುತ್ತಿದ್ದೇವೆ ಎಂದು ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಸಲೀಮ್ ಅಳವಂಡಿ. ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಐ) ಜಿಲ್ಲಾ ಕಾರ್ಯದರ್ಶಿಹುಲುಗಪ್ಪ ಅಕ್ಕಿ ರೊಟ್ಟಿ. ಕರ್ನಾಟಕ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ನಿಂಗು ಜಿ.ಎಸ್. ಬೆಣಕಲ್. ಕಾರ್ಮಿಕ ಸಂಘಟನೆ ಮುಖಂಡ ಕೆ.ಬಿ.ಗೋನಾಳ ಮುಂತಾದವರು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಎಸ್. ವಂಟಿಗೋಡಿ ಮಾತನಾಡಿ ಘಟನೆ ಗಮನಕ್ಕೆ ಬಂದಿದೆ. ಗಂಭೀರವಾಗಿ ತೆಗೆದುಕೊಂಡಿದ್ದೇವೆ ಆದಷ್ಟು ಬೇಗ ವಾಸ್ತವಾಂಶ ಹೇಳುತ್ತೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!