5b08c00e-4631-4888-9fc5-6586be574d5a

ಸಿರುಗುಪ್ಪ :ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಹಾಗೂ ಮಹನೀಯರ

ಜಯಂತೋತ್ಸವ ಅರ್ಥಪೂರ್ಣ ಆಚರಣೆ ತಹಸಿಲ್ದಾರ್ ಹೆಚ್ ವಿಶ್ವನಾಥ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ- ಕರ್ನಾಟಕ ಸರ್ಕಾರ ತಾಲೂಕ ಆಡಳಿತ ಸರ್ವರ ಸಹಭಾಗಿತ್ವದಲ್ಲಿ ಜನವರಿ 15ರಂದು ಶಿವಶರಣ ಶಿವಯೋಗಿ ಸಿದ್ದರಾಮೇಶ್ವರ ಜನವರಿ 19ರಂದು ಶಿವ ಶರಣ ಮಹಾಯೋಗಿ ವೇಮನ ಜನವರಿ 21ರಂದು ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತೋತ್ಸವ ಹಾಗೂ ಜನವರಿ 26ರಂದು ರಾಷ್ಟ್ರೀಯ ಹಬ್ಬ ಭಾರತದ ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರರಾದ ಹೆಚ್ ವಿಶ್ವನಾಥ ಅವರು ಹೇಳಿದರು.

ಅವರು ಸಿರುಗುಪ್ಪ ನಗರದ ತಾಲೂಕು ಪಂಚಾಯತ್ ನ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಮಹಾತ್ಮ ಗಾಂಧಿ ಸಭಾ ಭವನದಲ್ಲಿ ಆಯೋಜಿಸಿದ ಜನವರಿ 19ರಂದು ಶಿವಶರಣ ಮಹಾ ಯೋಗಿ ವೇಮನ ಅವರ ಜಯಂತಿ 21 ರಂದು ನಿಜಶರಣ ಅಂಬಿಗರ ಚೌಡಯ್ಯನವರ ಹಾಗೂ ಜನವರಿ 26ರಂದು ರಾಷ್ಟ್ರೀಯ ಹಬ್ಬ ಭಾರತದ ಗಣರಾಜ್ಯೋತ್ಸವದ ಉತ್ಸವ ಪೂರ್ವಭಾವಿ ಸಭೆ ಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

56 ಮಹನೀಯರ ಜಯಂತಿಗಳನ್ನು ಸರ್ಕಾರ ಆಚರಿಸಲಾಗುತ್ತಿದೆ ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿ ಶಿವಯೋಗಿ ವೇಮನ ಜಯಂತಿಯನ್ನು ಜನವರಿ 19ರಂದು ತಾಲೂಕ ಪಂಚಾಯತ್ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಸಂಕ್ಷಿಪ್ತವಾಗಿ ಆಚರಿಸುವಂತೆ ರೆಡ್ಡಿ ಜನ ಸಂಘದವರು ಸಲಹೆ ನೀಡಿದ್ದು ಸ್ವಾಗತಿಸಿದರು ನಿಜಶರಣ ಅಂಬಿಗರ ಚೌಡಯ್ಯನವರ 21ರಂದು ಜಯಂತಿ ಅಂಗವಾಗಿ ಚೌಡಯ್ಯನವರ ಭಾವಚಿತ್ರದ ಮೆರವಣಿಗೆಯನ್ನು ತಾಲೂಕ ಕ್ರೀಡಾಂಗಣದಿಂದ ಮುಖ್ಯ ರಸ್ತೆಯಿಂದ ತೆರಳಿ ತಾಲೂಕ ಕಚೇರಿ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಸಮಾರಂಭ ನಡೆಯುವಂತೆ ಕೋಲಿ ಸಮಾಜದವರು ಸಲಹೆ ನೀಡಿದರು ಮಹನೀಯರ ಕುರಿತು ವಿಶೇಷ ಉಪನ್ಯಾಸ ಆಯಾ ಸಮುದಾಯದವರು ಹೆಸರನ್ನು ಸೂಚಿಸುವಂತೆ ತಹಶೀಲ್ದಾರರು ಹೇಳಿದರು  .                    ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಅವರು ಮಾತನಾಡಿ ಜನವರಿ 26ರಂದು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವದಲ್ಲಿ ಬೆಳಿಗ್ಗೆ 7.30 ಗಂಟೆಗೆ ರಾಷ್ಟ್ರೀಯ ಧ್ವಜ ರೋಹಣ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ನೆರವೇರಿಸಿ ತಾಲೂಕ ಕ್ರೀಡಾ ಮೈದಾನದಲ್ಲಿ ಬೆಳಿಗ್ಗೆ 9:00ಗೆ ಶಾಸಕ ಬಿಎಮ್ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರರಿಂದ ಧ್ವಜಾರೋಹಣ ನೆರವೇರಿಸಲಾಗುವದು ಮಹನೀಯರ ಜಯಂತೋತ್ಸವ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಸಮುದಾಯದವರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು .

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ರಾಷ್ಟ್ರೀಯ ಸಾಕ್ಷರತಾ ಸದಸ್ಯ ಸಮಾಜ ಸುಧಾರಕ ಎ ಅಬ್ದುಲ್ ನಬಿ ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ ಗಾದಿಲಿಂಗಪ್ಪ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಘವೇಂದ್ರ ಶಿಕ್ಷಣ ಸಂಯೋಜಕ ಬಸವರಾಜ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲಿಂಗರಾಜ ರೆಡ್ಡಿ ತಾಲೂಕ ರೆಡ್ಡಿ ಜನ ಸಂಘದ ಪದಾಧಿಕಾರಿಗಳಾದ ಎಂ ಗೋಪಾಲ ರೆಡ್ಡಿ ಪಿ ಗೋವಿಂದ ರೆಡ್ಡಿ ಪಿ ಶ್ರೀನಿವಾಸ ರೆಡ್ಡಿ ಜೆ ರಾಮಕೃಷ್ಣ ರೆಡ್ಡಿ ಪ್ರಭಾಕರ ರೆಡ್ಡಿ ತಾಲೂಕ ಗಂಗಾ ಮತಸ್ಥರಾದ ಮತ್ತು ಸಂಘದ ಪದಾಧಿಕಾರಿಗಳಾದ ತಾಲೂಕ ಅಧ್ಯಕ್ಷ ಬಿ ಮಾರಣ್ಣ ನಗರ ಅಧ್ಯಕ್ಷ ಕಾಪುರ ಷಣ್ಮುಖ ದೇಶನೂರು ಹಿರಿಯ ಮುಖಂಡರು ಕೆ ರಾಮಣ್ಣ ಸಿರುಗುಪ್ಪ ಹಿರಿಯ ಮುಖಂಡ ಎಸ್ ಮುದುಕಪ್ಪ ಎಸ್ ಸುರೇಶ ಎಚ್ ಮಲ್ಲಯ್ಯ ಕೆ ವೆಂಕಟೇಶ ವಿವಿಧ ಸಮಾಜದ ಮುಖಂಡರು ತಮ್ಮ ಸಲಹೆ ಸೂಚನೆ ನೀಡಿದರು ವಿವಿಧ ಇಲಾಖೆ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!