ಜೈನರ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪನೆಗೆ
ಆರ್.ಚೇತನ್ ರಾಜ್ ಜೈನ್ ಒತ್ತಾಯ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ ವಿಜಯನಗರ: ಜೈನ್ ಸಮುದಾಯ ಕರ್ನಾಟಕದಲ್ಲಿ ಸಾಂಸ್ಕೃತಿಕವಾಗಿ ಮಹತ್ವದ ಕೊಡುಗೆ ನೀಡಿದೆ. ಜೈನ್ ಸಮುದಾಯವು ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಮಾಜಿ ನಾಮ ನಿರ್ದೇಶೀತ ನಗರ ಸಭೆ ಸದಸ್ಯ. ಆರ್ .ಚೇತನ್ ರಾಜ್ ಜೈನ್ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ರಾಜ್ಯ ಸರ್ಕಾರವು ಎಲ್ಲಾ ಸಮುದಾಯಗಳನ್ನು. ಅಭಿವೃದ್ಧಿ ಪಡಿಸಿದಂತೆ ಜೈನ್ ಸಮುದಾಯವನ್ನು ಅಭಿವೃದ್ಧಿ ಪಡಿಸಲು ನಿಗಮ ಮಂಡಳಿ ರಚಿಸುವ ಅಗತ್ಯವಿದೆ ಪ್ರತ್ಯೇಕ ನಿಗಮ ಮಂಡಳಿ ರಚಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಜೈನ್ ಸಮುದಾಯ ರಾಜ್ಯದಲ್ಲಿ ಕನ್ನಡಿಯ ಪ್ರಮಾಣದಲ್ಲಿದ್ದರು ನಿರ್ಲಕ್ಷಕ್ಕೆ ಒಳಗಾಗುತ್ತಾ ಬಂದಿದೆ.
ಆರ್ಥಿಕವಾಗಿ ಹಿಂದುಳಿದಿರುವ ಜೈನ್ ಸಮಾಜ ಬಾಂಧವರಿಗೆ ಸರಿಯಾಗಿ ಅನುದಾನ ಲಾಭ ದೊರಕುತ್ತಿಲ್ಲ ಕರ್ನಾಟಕ ಅತ್ಯಂತ ನಗರ ಪ್ರದೇಶಗಳಲ್ಲಿ ಎಂಟರಿಂದ ಹತ್ತು ಪ್ರತ್ಯೇಕ ಜೈನ ವಿದ್ಯಾರ್ಥಿ ನೆಲೆಗಳನ್ನು ಸ್ಥಾಪಿಸಬೇಕು ಅಲ್ಪಸಂಖ್ಯಾತ ಜೈನರಿಗೆ ಸಾಲ ಸೌಲಭ್ಯಗಳು ವಿದ್ಯಾರ್ಥಿವೇತನ ಇನ್ನಿತರ ಸೌಲಭ್ಯಗಳನ್ನು ಸರಿಯಾದ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು ಬಜೆಟ್ ನಲ್ಲಿ ವಿಶೇಷ ನಿಧಿಯನ್ನು ಮೀಸಲಿಡಬೇಕು .
ಇಲಾಖೆಯಲ್ಲಿ ಜೈನರಿಗೆ ಶಾಶ್ವತ ಸದಸ್ಯತ್ವ ನೀಡಬೇಕು ಅಲ್ಪಸಂಖ್ಯಾತ ಇಲಾಖೆಯಲ್ಲಿ ಉದ್ಯೋಗಾವಕಾಶವನ್ನು ನೀಡಬೇಕು ರಾಜ್ಯದ್ಯಂತ ಪ್ರಾಚೀನ ಬಸದಿಗಳು ಸ್ಮಾರಕಗಳ ರಕ್ಷಣೆಗೆ ವಿಶೇಷ ವಾರ್ಷಿಕ ಅನುದಾನ ನಿಗದಿ ಪಡಿಸಬೇಕು ನಿರ್ವಹಣೆಗೆ ಒಂದು ಸಮಿತಿಯನ್ನು ರಚಿಸಬೇಕು ಸಂಪುಟದಲ್ಲಿ ಜೈನರಿಗೆ ರಾಜಕೀಯ ಪ್ರತಿನಿಧಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು
ಈ ಸಮಾಜವನ್ನು ವೃದ್ಧಿಸಲು ನಿಗಮ ಮಂಡಳಿ ರಚಿಸುವ ಅಗತ್ಯವಿದೆ ಎಂದರು ಮಾಜಿ ನಾಮ ನಿರ್ದೇಶೀತ ನಗರ ಸಭೆ ಸದಸ್ಯ
ಆರ್ ಚೇತನ್ ರಾಜ್ ಜೈನ್ ಅವರು ಆಗ್ರಹಿಸಿದ್ದಾರೆ
