
ನಮ್ಮ ಜಾತ್ರೆಗೆ ನಾವು ಹೋಗೋಣ : ನಾಗರಾಜ ಬೆಣಕಲ್
ಕರುನಾಡ ಬೆಳಗು ಸುದ್ದಿ
ಕುಕನೂರ,21- ನಮ್ಮ ಜಾತ್ರೆಗೆ ನಾವು ಹೋಗೋಣ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಬೆಣಕಲ್ ಅವರು ಹೇಳಿದರು.
ಪಟ್ಟಣದ ಐಬಿಯಲ್ಲಿ ದಾವಣಗೆರೆ ರಾಜ್ಯಮಟ್ಟದ 38ನೇ ಸಮ್ಮೇಳನದ ಪೂರ್ವಭಾವಿ ಸಭೆ
ಪೂರ್ವ ಭಾವಿ ಸಭೆ ಉದ್ದೇಶಿಸಿ ಅಧ್ಯಕ್ಷತೆ ವಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಬೆಣಕಲ್ ಮಾತನಾಡಿ, ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ 38ನೇ ಸಮ್ಮೇಳನ ಫೆಬ್ರುವರಿ 3&4 ರಂದು ನಡೆಯಲಿದೆ. ರಾಜ್ಯಮಟ್ಟದ ಸಮ್ಮೇಳನ ಎಂದರೆ ಇದು ಪತ್ರಕರ್ತರ ಜಾತ್ರೆ ಇದ್ದಂತೆ ಆ ಜಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ ಹಿರಿಯ ಪತ್ರಕರ್ತರು ಸಾಹಿತಿಗಳು, ಅಂಕಣಕಾರರು, ಕವನಗಾರರು, ಈ ಜಾತ್ರೆಯಲ್ಲಿ ಬರುತ್ತಾರೆ ಇಂತಹ ಒಂದು ಸುಂದರವಾದ ಜಾತ್ರೆಯಲ್ಲಿ ನಾವು ಕೂಡ ನಮ್ಮ ಹಳ್ಳಿಯಿಂದ ಹೋಗೋಣ ಎಂದು ಹೇಳಿದರು.
ಸಮ್ಮೇಳನಕ್ಕೆ ಬರುವವರು ಈ ವರ್ಷದ ಸಂಘದ ಸದಸ್ಯತ್ವ ಗಾರ್ಡನ್ ಅನ್ನು ತಪ್ಪದೇ ತೆಗೆದುಕೊಳ್ಳಬೇಕು ಎಂದು ಹೇಳಿದರು. ಈ ಸಭೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಸವರಾಜ ಕೊಡ್ಲಿ, ಹಿರಿಯ ಪತ್ರಕರ್ತರಾದ ರುದ್ರಪ್ಪ ಭಂಡಾರಿ, ಮಂಜುನಾಥ ಅಂಗಡಿ, ಮಂಜುನಾಥ್ ಪ್ರಸಾದ್, ಪತ್ರಕರ್ತರಾದ ಮುರಾರಿ ಭಜಂತ್ರಿ, ಅಂಬರೀಶ್ ಕಂದಗಲ್ ಮಠ, ಬಸವರಾಜ ಕೊಪ್ಪದ, ಲಕ್ಷ್ಮಣ ಮಂಡಲ, ಬಿಡ್ನಾಳ, ಚಂದ್ರಕಾಂತ್ ದೊಡ್ಮನಿ, ರುದ್ರೇಶ ಆರುಕುಮಾರ್ ಚಂದ್ರಬೆರಳಿನ್, ಸಂಘದ ಸದಸ್ಯರು ಇದ್ದರು.