IMG-20240121-WA0045

ತಾಲೂಕು ಜಂಗಮ ಸಮಾಜದಿಂದ ಉಚಿತ ವೈದ್ಯಕೀಯ ತಪಾಸಣೆ ಯಶಸ್ವಿ 

 ಕರುನಾಡ ಬೆಳಗು ಸುದ್ದಿ 

ವಿಜಯನಗರ,21- ನಗರದ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ ಬಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವೀರಶೈವ ಲಿಂಗಾಯತ ಸಮಾಜದ ತಾಲೂಕು ಬೇಡ ಜಂಗಮ ಸಂಸ್ಥೆ ಹಮ್ಮಿಕೊಂಡಿತ್ತು.

ಧಾರವಾಡದ ಸತ್ತೂರಿನ ಎಸ್.ಡಿ.,ಎಂ.ನಾರಾಯಣ ಹಾರ್ಟ ಸೆಂಟರ್ ತಜ್ಞ ವೈದ್ಯರ ಶಿಬಿರದಲ್ಲಿ ವಿವಿಧ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ಹೃದಯ ಶಾಸ್ತ್ರ ಚಿಕಿತ್ಸೆಗೆ ಐ.ಸಿ.ಜಿ, & 2ಡಿ, ಎಕೋ ಪರೀಕ್ಷೆ ಜೊತೆಗೆ ಮೊಣಕಾಲು ನೋವು, ಕಿವಿ, ಮೂಗು, ಗಂಟಲು, ಬಿಪಿ, ಮದುಮೇಹಕ್ಕೆ ಕಾಯಿಲೆಗಳ ತಪಾಸಣೆಯ ಜೊತೆಗೆ ಶಿಬಿ ರ್ಡಾದಲ್ಲಿ ತಪಾಸಣೆ ನಡೆಸಿದವರಿಗೆ ರೋಗಿಗಳ ಸಂಘಕ್ಕೆ ಸಂಬಂಧಿಸಿದ ಉಚಿತ ಚಿಕಿತ್ಸೆಯನ್ನು ನೀಡಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಚಾಲನೆ ಕೊಟ್ಟರು, ತಪಾಸಣಾ ಶಿಭಿರದಲ್ಲಿ 450ಕ್ಕೂ ಹೆಚ್ಚು ಜನರು ತಪಾಸಣೆಯಲ್ಲಿ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಬೇಡಜಂಗಮ ಸಮಾಜದ ಅದ್ಯಕ್ಷ ಎಸ್.ಎಂ.ಕಾಶಿನಾಥಯ್ಯ ,ಮತ್ತು ವಿಜಯಲಕ್ಷ್ಮಿ ಹಿರೇಮಠ ಅವರ ಅದ್ಯಕ್ಷತೆಯಲ್ಲಿ ನಡೆದ. ತಪಾಸಣಾ ಶಿಬಿರದಲ್ಲಿ ನಗರದ ಖ್ಯಾತ ವೈದ್ಯರಾದ ಡಾ.ಮೃತ್ಯುಂಜಯ ವಸ್ತ್ರದ, ಡಾ.ಸುಮಂಗಲಾದೇವಿ, ಡಾ.ಪೆರುಮಾಳ್ ಸ್ವಾಮಿ, ಡಾ.ಹರಿಪ್ರಸಾದ (ಇ,ಎನ್.ಟಿ.) ಡಾ.ಮಂಜುಳಾ(ಜನರಲ್ ಫಿಜಿಷಿಯನ್).ಡಾ.ಎಲ್.ಆರ್.ಶಂಕರನಾಯ್ಕ, ಡಾ.ಎಂ. ಧರ್ಮನಗೌಡ , ಡಾ.ಸಾಗರ, ಡಾ.ಶರಣ ಪ್ರಸಾದ ಡಾ. ಮಂಟೂರ್ ಮಠ, ಆರ್,ವಿ,ಗುಮಾಸ್ತೆ, ಮಂಜುನಾಥ ಹಿರೇಮಠ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!