ನಾನು ಗುಜರಿ ಲೀಡರ್ ಅಲ್ಲಾ
ಸಂಗಣ್ಣ ಕರಡಿ ಮೂರು ಪ್ರಶ್ನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 16- ಸಂಗಣ್ಣ ಕರಡಿ ಗುಜರಿ ಲೀಡರ್ ಅಂತ ನನ್ನ ಬಿಟ್ಟಿರಬಹುದು ಎಂದು ಟಿಕೆಟ್ ತಪ್ಪಿದ ಬಗ್ಗೆ ಬಿಜೆಪಿಯ ಯಾರ ಹೆಸರು ಹೇಳದೆ ಟಾಂಗ್ ಕೊಟ್ಟರು ಸಂಗಣ್ಣ ಕರಡಿ.
ಅವರು ಕೊಪ್ಪಳ ತಾಲೂಕಿನ ಗೀಣಗೇರಾಗ್ರಾಮದ ರೈಲ್ವೆ ಮೇಲ್ಸೇತುವೆ ಉದ್ಘಾಟಿನೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಭಾರತಿಯ ಜನತಾ ಪಕ್ಷದ ರಾಜ್ಯ ಹಾಗೂ ಕೇಂದ್ರ ಮುಖಂಡರು ನನ್ನನ್ನು ಗುಜರಿ ಲೀಡರ್ ಅಂದುಕೊಂಡಿದ್ದಾರೆ ಅವರಿಗೆ ಉತ್ತರ ಸಿಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಬೆಸರ ವ್ಯಕ್ತ ಪಡಿಸಿದರು.
ನಾನು 10ವರ್ಷ ಸಂಸದರಾಗ ಉತ್ತಮ ಸೇವೆ ಸಲ್ಲಿದ ತೃಪ್ತಿನನಗಿದ್ದು ಜನರ ಆಶೀರ್ವಾದ ಮಾಡಿದಾಗ ಪ್ರಾಮಾಣಿಕ ಸೇವೆ ಮಾಡಿದ್ದೆನೆ ಎಂದರು,
ಮೂರು ಪ್ರಶ್ನೆ ಃ ನನ್ನ ಹೃದಯದ ಬಾರ ಕಡಿಮೆಯಾಗಲು ಪಕ್ಷದ ಮುಖಂಡರು ಸೌಜ್ನ್ಯಕ್ಕು ಟಿಕೆಟ್ ಬೆರೆಯವರಿಗೆ ಕೊಡುವ ಕುರಿತು ಹಾಗೂ ಇದುವರೆಗೂ ನನ್ನ ಜೋತೆ ಮಾತನಾಡಿಲ್ಲಾ ಯಾಕೆ ? , ನನ್ನ ಕೈಬಿಟ್ಟಿದ್ದು ಯಾಕೇ ? ಹಾಗೂ ಯಾರ ಮಾತು ಕೇಳಿ ನನಗೆ ಟಿಕೆಟ್ ತಪ್ಪಿಸಿದ್ದಾರೆ ? ಈ ಮುರು ಪ್ರಶ್ನೇಗಳಿಗು ನನಗೆ ಉತ್ತರ ಸಿಗಬೇಕು ಎಂದು ಎಚ್ಚರಿಸಿದರು.
ನಾನು ಬಿಜೆಪಿ ಪಕ್ಷ ಬಿಡಲ್ಲಾ ಆದರೆ ಈ ಮೂರು ಪ್ರಶ್ನೆಗೆ ಉತ್ತರ ಸಿಕ್ಕಮೇಲೆ ನಾನು ಪಕ್ಷದ ಪರ ನಿಲ್ಲಲೂ ಚಿಂತಿಸುವೆ ಎಂದರು.
ಸಕ್ರಿಯ ರಾಜಕಾರಣ ; ನಾನು ಸಕ್ರಿಯ ರಾಜಕಾರಣದಲ್ಲಿ ಇರುವೆ , ಬಡವರ ಹಾಗೂ ನೊಂದವರಿಗಾಗಿ ನನ್ನ ಜೀವನಮುಡಿಪಿಡುವೆ ಎಂದರು.
