ನಿವೇದಿತಾ ಇಂಗ್ಲೀಷ ಮಿಡಿಯಂ ಸ್ಕೂಲ್ ನ
23ನೇ ಶಾಲಾ ವಾರ್ಷಿಕೋತ್ಸವ
ಬಸವಾರಜ ಸಜ್ಜನ್ ಉದ್ಘಾಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,೧೦- ನಗರದ ಶ್ರೀ ವಿಠಲ ಮಾದರಿ ನಗರ ನಿವೇದಿತಾ ವಿದ್ಯಾ ಸಂಸ್ಥೆಯ ನಿವೇದಿತಾ ಇಂಗ್ಲೀಷ ಮಿಡಿಯಂ ಸ್ಕೂಲ್ ನ 23ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಸಡಗರ ಸಂಭ್ರಮದಿಂದ ಜರುಗಿತು.
ವಾರ್ಷಿಕೋತ್ಸವ ಸಮಾರಂಭವನ್ನು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸಜ್ಜನ ಉದ್ಘಾಟಿಸುದರು. ನಿವೇದಿತಾ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾರದಾಬಾಯಿ ಎ. ಪುಲಸ್ಕರ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪುರ, ನಗರ ಸಭೆ ಸದಸ್ಯ ಅಮ್ಜದ ಪಟೇಲ,ನಿವೇದಿತಾ ಇಂಗ್ಲೀಷ್ ಮಿಡಿಯಂ ಸ್ಕೂಲ್ ನ ಮುಖ್ಯೋಪಾಧ್ಯಾಯ ನಿತೇಶ ವಿ. ಪುಲಸ್ಕರ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಶಲಾ ಮಕ್ಕಳಿಂದ ವಿವಿಧ ಹಾಡೂಗಳಿಗೆ ಮಕ್ಕಳು ನೃತ್ಯ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ನೇರೆದಿದ್ದರು.
