WhatsApp Image 2024-02-26 at 6.37.41 PM

ಸಂಗೀತ ಭಾರತಿಯಿಂದ ಹಿರಿಯ ಪತ್ರಕರ್ತ “ಬಿ ಹೆಚ್ ಎಸ್ ರಾಜು ರವರಿಗೆ ರಾಜ್ಯ ಮಟ್ಟದ ಸೇವಾ ಪ್ರಶಸ್ತಿ

ಕರುನಾಡ ಬೆಳಗು ಸುದ್ದಿ

ವಿಜಯನಗರ,26- 386ನೇ ಮಾಸಿಕ ಚಿಂತನ ಸಂಭ್ರಮ -2024ರ, 33ನೇ ವರ್ಷದ ಸಂಭ್ರಮ ಆಚರಣೆಯ ಅಂಗವಾಗಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ” ಸಂಗೀತ ಭಾರತಿ” ಸಂಸ್ಥೆ ಯಿಂದ ಪತ್ರಿಕಾ ಮಾದ್ಯಮ, ಸಾಮಾಜಿಕ ಕಾರ್ಯಗಳಲ್ಲಿ ಕವಿ ಗೋಷ್ಠಿ, ಉಪನ್ಯಾಸ, ಸಂಗೀತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರಿಗೆ ಸನ್ಮಾನ ಮತ್ತು ರಾಜ್ಯ ಮಟ್ಟದ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಭಾನುವಾರ ನಗರದ ಚಿತ್ತವಾಡಿಗಿಯ ಮಹಿಳಾ ಸಮಾಜ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದರು.

ಈ ಸಂಧರ್ಭದಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಮೂವತ್ತು ವರ್ಷಗಳಿಂದ ಅವಿರತ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಿ.ಹೆಚ್.ಎಸ್.ರಾಜು ರನ್ನು ಸನ್ಮಾನಿಸಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಪತ್ರಿಕಾ ರಂಗ ಎನ್ನುವುದು ಒಂದು ಸಾಮಾಜಿಕ ಸೇವೆಯಾಗಿದೆ. ನೊಂದವರಿಗೆ ನ್ಯಾಯ ಒದಗಿಸಲು ಸಮಾಜದ ಮತ್ತು ಅಧಿಕಾರಿಗಳ ನಡುವೆ ಸೇತುವೆಯಂತೆ ಕೆಲಸಮಾಡುವ ಒಂದು ಅತ್ತ್ಯು ನ್ನತ ವೇಧಿಕೆಯಾಗಿದೆ ಎಂದರು.

ಹುದುಗಿ ಹೋಗಿರುವನಂತಹ ವಿಷಯಗಳನ್ನು ಹೆಕ್ಕಿ ತೆಗೆದು ಸಮಾಜಕ್ಕೆ ತಿಳಿಸುವುದೇ ನಮ್ಮ ಕಾಯಕವಾಗಿದೆ. ಅದು ನಿರಂತರವಾಗಿ ನಡೆಯುತ್ತಿರುತ್ತದೆ. ಪತ್ರಿಕಾಮಾಧ್ಯಮದಲ್ಲಿ ಎಲೆ ಮರಿ ಕಾಯಿಯಂತೆ ನಿರಂತರ ಸೇವೆ ಸಲ್ಲಿಸುವತ್ತಿರುವ ನಮ್ಮಂತವರನ್ನು ಇಂತಹ ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ. ಈ ಸಂಸ್ಥೆ1992ರಲ್ಲಿ ಸ್ಥಾಪನೆಯಾಗಿ 33ವರ್ಷಗಳಿಂದ ಸಮಾಜದಲ್ಲಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಹೀಗೆ ಇವರ ಸೇವೆ ಮುಂದುವರಿಯಲಿ ಎಂದು ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಪಿ. ಕಲ್ಲಂಭಟ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಶ್ರೀನಿವಾಸ್ ದೇಶಪಾಂಡೆ, ವಿಜಯಲಕ್ಷ್ಮಿ ಭರತ ನಾಟ್ಯ ಕಲಾವಿದೆ, ರಾಜು ಬಿಲಂಕರ್, ವಿಷ್ಣು ತೀರ್ಥ ಕಲ್ಲೂರ ಪ್ರಸಾದ್, ಪ್ರೊ. ರಾಘವೇಂದ್ರ, ಕಲಾವಿದೆ ರಿಯಾ ನಂದನ್ ಇವರಿಗೆ ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಪಿ. ಕಲ್ಲಂಭಟ್, ಎಚ್ ಪಿ ವಿಶ್ವ ಶಿವಶಂಕರ ಭಟ್, ವಿಜಯನಗರ ಜಿಲ್ಲಾ ಅದ್ವೈತ ಮಹಾಸಭಾ, ಶಾಲಿನಿ ಜಯಂತ್, ಶಿವ ಶಂಕರ್ ಭಟ್, ವಿಡಿ ವೆಂಕನಗೌಡರು, ಎಸ್ ಎಂ ರವಿಕಾಂತ್, ಮೋಹನ್ ರಾವ್ ಸುಂಕದ್, ಗೀತಾ ಸುರೇಶ್, ಕವಿತಾ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!