ಬಳ್ಳಾರಿ : ಎಸ್ ಯು ಸಿ ಐ ನಿಂದ ದೇವದಾಸ್ ನಾಮಪತ್ರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 12- ಎಸ್ ಯು ಸಿ ಐ ( ಕಮ್ಯುನಿಸ್ಟ್ ) ಪಕ್ಷದ ವತಿಯಿಂದ ಏ ದೇವದಾಸ್ ಇಂದು ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ವಡ್ಡರ ಬಂಡಿಯಲ್ಲಿರುವ ಪಕ್ಷದ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ, ತನ್ನ ಬೆಂಬಲಿಗರು ಮತ್ತು ಎಸ್ಸಿಐ ಪದಾಧಿಕಾರಿಗಳೊಂದಿಗೆ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ ಯು ಸಿ ಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಾಯ ಮಾತನಾಡುತ್ತಾ ಈ ದೇವದಾಸ್ ಜನ ಹೋರಾಟಗಳಿಂದ ಹೊರಹೊಮ್ಮಿದ ಎಸ್ ಯು ಸಿ ಐ ಅಭ್ಯರ್ಥಿ ಮಹಾನ್ ಮಾರ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರ ಚಿಂತನೆಗಳಿಗೆ ಆಕರ್ಷಿತರಾಗಿ ಕಳೆದ 40 ವರ್ಷಗಳಿಂದ ಸಂಪೂರ್ಣವಾಗಿ ಜನ ಹೋರಾಟಗಳಿಗೆ ತಮ್ಮದೇ ಮುಡುಪಾಗಿ ಇಟ್ಟುಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್ವಿಸಿಐ ಪಕ್ಷದ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಎ ದೇವದಾಸ್, ಬಳ್ಳಾರಿ ಜಿಲ್ಲಾ ಸಮಿತಿ ಸದಸ್ಯರಾದ ಎಂ ಎಸ್ ಮಂಜುಳಾ, ಸೋಮಶೇಖರಗೌಡ, ಡಾಕ್ಟರ್ ಪ್ರಮೋದ್, ಎನ್ ಶಾಂತ, ಗೋವಿಂದ ಮುಂತಾದವರು ಉಪಸ್ಥಿತರಿದ್ದರು.
