
ಬಿಜೆಪಿಯವರು ನುಡಿದಂತೆ ನಡೆಯಲ್ಲಾ – ಸಿದ್ದರಾಮಯ್ಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 19- ಬಿಜೆಪಿಯವರು ನುಡಿದಂತೆ ನಡೆಯುವವರಲ್ಲಾ ಅವರು ಡೊಂಗಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಅವರು ಕೊಪ್ಪಳದಲ್ಲಿ ಮಾಧ್ಯಮದ ಜೋತೆ ಮಾತನಾಡುತ್ತಾ ಬಿಜೆಪಿಗರು ನಮ್ಮ ಗ್ಯಾರಂಟಿ ಯೋಜನೆಗಳನ್ನ ವಿರೋಧಿಸಿ ಕೇಲ ರಾಜ್ಯಗಳಲ್ಲಿ ಅವುಗಳನ್ನ ಜಾರಿಗೆ ಬರುತ್ತಿದ್ದಾರೆ.
ವಿದ್ಯುತ್ ಕದ್ದ ಕಳ್ಳನಿಗೆ ಬೆರೆಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲಾ ಎಂದು ಹೆಚ್ಚ್ ಡಿ ಕುಮಾರ ಸ್ವಾಮಿಗಳ ಕುರಿತು ಮಾತನಾಡಿದ ಅವರು. ಅವರಿಗೆ ನಮ್ಮ ಜನಪ್ರೀಯತೆ ಸಹಿಸಲು ಆಗುತ್ತಿಲ್ಲಾ ಎಂದರು.
ಮಗಳ ಮದುವೆಗೆ ಆಹ್ವಾನಿಸಲು ಬಿ.ಶ್ರೀ ರಾಮೂಲು ಬಂದಿದ್ದರು ಯಾವುದೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯ ಇಲ್ಲವೇಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹೇಂದ್ರ ಛೋಪ್ರಾ ಹಾಗೂ ಗೂಳಪ್ಪ ಹಲಗೇರಿ ಇತರರು ಇದ್ದರು.