ಬೀದಿಗೆ ಬಂದ ಶಿಕ್ಷಕರ ಸಂಘದ ಒಳ ಜಗಳ
ಅಧ್ಯಕ್ಷರ ಕಾರು ಕದ್ದ ಆರೋಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 20- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಕಾರು ವಾಹನ ಸಂಖ್ಯೆ Ka- 50. Mb – 0382 ಕದ್ದ ಘಟನೆ ಜರುಗಿದೆ.
ರವಿವಾರ ರಾತ್ರಿ ಈ ಘಟನೆ ಜರುಗಿದ್ದು ದೂರು ನೀಡಲು ಹೋದರೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ಸ್ವೀಕರಿಸಿಲ್ಲ ಎನ್ನಲಾಗಿದೆ.
ಘಟನೆ ವಿವರ : ಕೆಲ ತಿಂಗಳ ಹಿಂದೇ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೊಂದಲ ಮುಂದುವರೆದಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ.

ಬಿದಿಗೆ ಬಂದ ಶಿಕ್ಷಕರ ಸಂಘದ ಜಗಳ : ಇದುವರೆಗು ಶಿಕ್ಷಕರ ಸಂಘದ ಜಗಳ ಕಚೇರಿಗೆ ಮಾತ್ರ ಸೀಮಿತ ವಾಗಿದ್ದ ಒಳ ಜಗಳ ಸಧ್ಯ ಬಿದಿಗೆ ಬಂದಿದ್ದು . ಬರುವ ದಿನಗಳಲ್ಲಿ ಯಾವ ಹಂತಕ್ಕೆ ತಲುಪುವುದು ಕಾದು ನೋಡಬೇಕು.
ತಾವು ಅಧ್ಯಕ್ಷರೆಂದು ಅಧಿಕಾರ ವಹಿಸಿಕೊಂಡಿರುವ ಮಂಡ್ಯದ ನಾಗೇಶ ಹಾಗೂ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಅವರು ಪ್ರಕರಣ ನ್ಯಾಯಾಲಯದಲ್ಲಿ ಇದ್ದರು ರಾಜ್ಯದ ಜಿಲ್ಲಾಧ್ಯಕ್ಷರ ಸಭೆ ನಡೆಸಿ ಹಲವಾರು ನಿರ್ಣಾಯ ಕೈಗೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣ ನ್ಯಾಯಾಲಯದಲಿದ್ದು ಹೈಕೋರ್ಟ್ ನಲ್ಲಿ ಒಂದು ತಿಂಗಳ ಶಿಕ್ಷಕ ಸಂಘಕ್ಕೆ ಇದು ಒಂದು ಕಪ್ಪು ಚುಕ್ಕೆ ಯಾಗಿದ್ದು ಇತೀಚಿಗೆ ನಮ್ಮ ಸಂಘದಲ್ಲಿ ನಡೆಯುತ್ತಿರುವ ನನಗೆ ಅತ್ಯಂತ ಬೆಸರ ತರಿಸಿದೆ ಎಂದು ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಹೇಳಿದರು.
