ದ್ವಿತೀಯ ಪಿಯುಸಿ ಫಲಿತಾಂಶ ಮೋಡಿ ಮಾಡಿದ ಬೆಟಗೇರಿ ಗ್ರಾಮದ ಅವಳಿ ಸಹೋದರಿಯರು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11- ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಗಮನ ಸೆಳೆದಿದ್ದ ಬೆಟಗೇರಿ ಗ್ರಾಮದ ಅವಳಿ ಸಹೋದರಿಯರು ದ್ವಿತೀಯ ಪಿಯುಸಿಯಲ್ಲೂ ಮತ್ತೆ ಸಮಾನ ಅಂಕ ಪಡೆಯುವ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.
ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದ ಅವಳಿ ಸಹೋದರಿಯರಾದ ಕಾವ್ಯ ರಮೇಶ ಬನ್ನಿಕೊಪ್ಪ600 ಕ್ಕೆ 574
ಹಾಗೂ ಕವಿತಾ ರಮೇಶ ಬನ್ನಿಕೊಪ್ಪ 600 ಕ್ಕೆ 568 ಸಮಾನ ಅಂಕ ಗಳಿಸಿ ಅಂಕಪಟ್ಟಿಯಲ್ಲೂ ಅವಳಿಗಳಾಗಿ ಅಚ್ಚರಿ ಮೂಡಿಸಿದ್ದಾರೆ. ರೈತರಾದ ರಮೇಶ ಬನ್ನಿಕೊಪ್ಪ. ಇವರ ಮಕ್ಕಳಾದ ಇವರು ಎಸ್ಎಸ್ಎಲ್ಸಿಯಲ್ಲೂ ಸಮಾನ ಅಂಕ ಗಳಿಸಿದ್ದರು. ಇದೀಗ ಎರಡು ವರ್ಷಗಳ ಬಳಿಕ ಮತ್ತೊಂದು ಅಚ್ಚರಿ ಹಾಗೂ ಬೆರಗು ಮೂಡಿಸುವ ಫಲಿತಾಂಶ ಪಡೆದಿದ್ದಾರೆ.
ಬೆಟಗೇರಿ ಗ್ರಾಮ ಅವಳಿ ಸಹೋದರಿಯರಿಗೆ ಕಲಾವಿಭಾಗದಲ್ಲಿ ಸಮಾನ ಅಂಕ ಜಸ್ಟ್ ಮಿಸ್*
ವಿಜಯ ನಗರ ಜಿಲ್ಲೆಯ ಕೊಟ್ಟೂರು ಇಂದು ಜ್ಯೂನಿಯರ್ ಪಿಯುಸಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಅವಳಿ ಜವಳಿ ಹೆಣ್ಣು ಮಕ್ಕಳಿಬ್ಬರು ಈ ಬಾರಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಅಂಕಗಳ ವ್ಯತ್ಯಾಸದೊಂದಿಗೆ ಉತ್ತಮ ಸಾಧನೆ ಮಾಡಿರುವ ಫಲಿತಾಂಶ ಬುಧವಾರ ಲಭ್ಯವಾಗಿದೆ. ರಮೇಶ ಬನ್ನಿ ಕೊಪ್ಪ ಇವರ ಮಕ್ಕಳಾದ ಒಟ್ಟು 574ಅಂಕ ಗಳಿಸಿ ಡಿಸ್ಟಿಂಗ್ಶನ್‌ನಲ್ಲಿ 75% ಉತ್ತೀರ್ಣಳಾಗಿದ್ದರೆ, ಆಕೆಯ ಸಹೋದರಿ 568 ಅಂಕ ಪಡೆದು74% ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.
ಈ ಇಬ್ಬರು ಅವಳಿ ಜವಳಿಗಳು ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಯೂ ಸಮಾನ ಅಂಕ ಪಡೆಯವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಬಾರಿ ಕೇವಲ ಶೇ. ಒಂದರಷ್ಟು ಅಂಕ ವ್ಯತ್ಯಾಸದಿಂದ ಸಮಾನ ಅಂಕ ಪಡೆಯುವುದು ಜಸ್ಟ್ ಮಿಸ್ ಆಗಿದೆ
