WhatsApp Image 2024-04-06 at 4.24.47 PM

ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಮತದಾನ ಕಾರ್ಯ ಯಶಸ್ವಿಗೊಳಿಸಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 6- ಚುನಾವಣೆಯ ಮಾರ್ಗಸೂಚಿಗಳನ್ನು ಸರಿಯಾಗಿ ತಿಳಿದುಕೊಂಡು ಅಚ್ಚುಕಟ್ಟಾಗಿ ಮತ್ತು ಪ್ರಾಮಾಣಿಕತೆಯಿಂದ ಮತದಾನ ಕಾರ್ಯ ಪೂರ್ಣಗೊಳಿಸಬೇಕು. ಯಾವುದೇ ಆತುರಕ್ಕೆ ಒಳಗಾಗದೇ ಸಮಚಿತ್ತರಾಗಿ ತರಬೇತಿಯನ್ನು ಪಡೆಯುವ ಮೂಲಕ ಮತದಾನ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ಪಿಆರ್‍ಓ, ಎಪಿಆರ್‍ಓ, ಪಿಒ ಅಧಿಕಾರಿಗಳಿಗೆ ತಿಳಿಸಿದರು.

ಅವರು ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ನಗರದ ಕೋಟೆ ಪ್ರದೇಶದ ಸೆಂಟ್ ಜೋಸೆಫ್ ಶಾಲೆಯಲ್ಲಿ ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಶುಕ್ರವಾರದಂದು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮತನಾಡಿದರು.

ಮತಯಂತ್ರವನ್ನು ಹೇಗೆ ನಿರ್ವಹಣೆ ಮಾಡಬೇಕು, ನಮೂನೆಗಳನ್ನು ಹೇಗೆ ಭರ್ತಿ ಮಾಡಬೇಕು, ಮತದಾನಕ್ಕೂ ಮುನ್ನ ಯಾವೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ಯಾವ ಹಂತದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಮತದಾರರೊಂದಿಗೆ ಹೇಗೆ ವರ್ತನೆ ಮಾಡಬೇಕು ಮುಂತಾದ ವಿಷಯಗಳನ್ನು ತರಬೇತಿಯ ವೇಳೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಚುನಾವಣಾ ಕರ್ತವ್ಯ ನಿರ್ವಹಣೆ, ಮಸ್ಟರಿಂಗ್ ಪ್ರಕ್ರಿಯೆ ಮತ್ತು ಸಂಬಂಧಿತ ಚಟುವಟಿಕೆಗಳು, ಮತಗಟ್ಟೆಗಳಲ್ಲಿ ಇವಿಎಂಗಳ ವ್ಯವಸ್ಥೆ, ಮತದಾನ ಪ್ರಕ್ರಿಯೆ, ಬೂತ್‍ಗಳಲ್ಲಿ ಪೋಲಿಂಗ್ ಏಜೆಂಟರ ನಿರ್ವಹಣೆ ಕುರಿತು ಮಾಹಿತಿ ನೀಡಿದ ಅವರು, ಮತದಾನಕ್ಕೂ ಮುನ್ನ ಮತದಾರರು ಸಲ್ಲಿಸಿದ ದಾಖಲೆಗಳನ್ನು ಪಿಆರ್‍ಒಗಳು, ಎಪಿಆರ್‍ಒಗಳು ಮತ್ತು ಸಿಬ್ಬಂದಿಗಳು  ಪರಿಶೀಲನೆ ನಡೆಸಬೇಕು ಎಂದರು

Leave a Reply

Your email address will not be published. Required fields are marked *

error: Content is protected !!