ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಾರ್ಷಿಕ 1 ಲಕ್ಷ ರೂಪಾಯಿ : ರಾಜಶೇಖರ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 6- ದೇಶದ ಅಭಿವೃದ್ಧಿ ಸರ್ವ ಜನಾಂಗ ಐಕ್ಯತೆಗೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ನೀಡುವ ಯೋಜನೆ ರಾಹುಲ್ ಗಾಂಧಿಯವರು ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಂತೆ ಈ ಯೋಜನೆಯನ್ನು ಕೂಡ ಜಾರಿ ಗೊಳಿಸಲಾಗುವುದು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ನಿಯೋಜಿತ ಅಧಿಕೃತ ಅಭ್ಯರ್ಥಿ ಡಾ ಕೆ ರಾಜಶೇಖರ ಹಿಟ್ನಾಳ್ ಅವರು ಹೇಳಿದರು.
ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಭಾಗದಲ್ಲಿ ಸರ್ವಾಂಗಿಣ ಅಭಿವೃದ್ಧಿಗೆ ಹಾಗೂ ನೆಮ್ಮದಿಯ ಬದುಕಿಗೆ ನನ್ನನ್ನು ಭಾರಿ ಬಹುಮತದಿಂದ ಗೆಲವಿಗೆ ಶ್ರಮ ವಹಿಸಬೇಕು ಎಂದು ಕಾಂಗ್ರೆಸ್ ಮುಖಂಡರಿಗೆ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ವಿನಂತಿಸಿ ಮನವಿ ಮಾಡಿದರು.
ಸಿರುಗುಪ್ಪ ನಗರದ ಖಾದರ್ ಶಾ ಮೌಲಾ ದರ್ಗಾದ ಆಸ್ಥಾನಕ್ಕೆ ತೆರಳಿದ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ಕೆ ರಾಜಶೇಖರ ಹಿಟ್ನಾಳ್ ಅವರು ದರ್ಗಾದ ಮುಖ್ಯಸ್ಥರು ಸಜ್ಜಾದ ನಶೀನ್ ಜನಪರ ಚಿಂತಕರು ಜಮೀನ್ದಾರರು ಸೈಯದ್ ಮೋಹಿದೀನ್ ಖಾದ್ರಿ ಹಾಗೂ ಮುಜಾವರ್ ಎ ಟೈಲರ್ ಮಹೆಬೂಬ್ ಸುಭಾನ್ ಅವರ ಅನು ಉಪಸ್ಥಿತಿಯಲ್ಲಿ ವಿಶೇಷವಾಗಿ ಜಿಯಾರತ್ ದರ್ಶನ ಆಶೀರ್ವಾದ ಪಡೆದರು.
ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ನಗರಸಭಾ ಸದಸ್ಯರಾದ ಮೀರಾ ಹುಸೇನ್ 33 ನಜೀರ್ ಹೆಚ್ ಗಣೇಶ್ ಮಾಜಿ ಸದಸ್ಯರಾದ ಹಾಜಿ ಚೌದ್ರಿ ಖಾಜಾ ಸಾಬ್ ಕೊಡ್ಲೆ ಮಲ್ಲಿಕಾರ್ಜುನ ಹಂಡಿ ಹಾಶಿಮ್ ಜಿ ಎಸ್ ಮಿಂತಿ ಟಿಎಂ ಶಫಿ ರಾವಿಹಾಳ್ ಹುಸೇನ್ ಪೀರಾ ಸಾಬ್ ಹಾಜಿ ಅಬ್ದುಲ್ ನಬಿ ಡಬಲ್ ಬಾಂಡ್ ಹಾಜಿ ಟಿಜಿ ಅಬ್ದುಲ್ ಗನಿ ಗೊರವರ ಶ್ರೀನಿವಾಸ್ ಪವನ್ ಕುಮಾರ್ ದೇಸಾಯಿ ಕೋಟಿ ರೆಡ್ಡಿ ಚಿಟಿಕಿ ಹುಸೇನ್ ಸಾಬ್ ಕೆ ಮಿಜಾಬಾ ಹನೀಫ್ ಫಯಾಜ್ ಎಟಿ ಇಬ್ರಾಹಿಂ ಗೌಸಿ ನೂರಾರು ಜನ ಇದ್ದರು.
