
ಸಿರುಗುಪ್ಪ: ತಾಲೂಕು ಪಂಚಾಯತ್ ಸಭಾಭವನದಲ್ಲಿ ಮತದಾನ ಜಾಗೃತಿ ಕವಿ ಗೋಷ್ಠಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 25- ಭಾರತದ ಸಂವಿಧಾನ ನೀಡಿದ ಹಕ್ಕು ಪ್ರತಿಯೊಬ್ಬರು ಮತದಾರರು ಪ್ರಜಾಪ್ರಭುತ್ವ ಗಟ್ಟಿ ಗೊಳಿಸಲು ಕಡ್ಡಾಯವಾಗಿ ಮತದಾನ ಮಾಡಿ ಸ್ಥಿರ ಸರ್ಕಾರಕ್ಕೆ ಅಂಕಿತ ಹಾಕಬೇಕು ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಬಸವರಾಜ ಅವರು ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಜಿಲ್ಲಾ ಆಡಳಿತ ತಾಲೂಕು ಆಡಳಿತ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸ್ವೀಪ್ ಸಮಿತಿ ಸಹಭಾಗಿತ್ವದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾನದ ಜಾಗೃತಿ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಉದ್ಘಾಟನೆಯನ್ನು ಮಾಡಿದ ಅವರು ಕವಿಗಳನ್ನು ಉದ್ದೇಶಿಸಿ ಮತದಾನದ ಜಾಗೃತಿ ಕುರಿತು ಮಾತನಾಡಿದರು.
ತಾಲೂಕ ಪಂಚಾಯತ್ ವ್ಯವಸ್ಥಾಪಕಿ ಕೋರಿ ಸುಜಾತ ಅವರು ಮಾತನಾಡಿ ನನ್ನೊಬ್ಬರ ಮತದಿಂದ ಏನಾದಿತು ಎನ್ನುವ ಮನೋಧೋರಣೆ ದೂರ ಮಾಡಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಹಿರಿಯ ಸಾಹಿತಿ ಕವಿ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ಅವರು ಮಾತನಾಡಿ ನನ್ನ ಮತ ಒಂದು ನನ್ನ ಮತದ ಶಕ್ತಿ ರಾಷ್ಟ್ರೀಯ ಯುವಕರೇ ಹಕ್ಕನ್ನು ಚಲಾಯಿಸಿ ಚುನಾವಣಾ ಆಯೋಗದ ಸಂದೇಶವನ್ನು ಪಾಲಿಸಬೇಕು ಪ್ರಜಾಪ್ರಭುತ್ವದ ಆಶಯ ಈಡೇರಿಸಬೇಕು ಎಂದು ತಾವು ರಚಿಸಿದ ಕವನದ ಮೂಲಕ ವಿವರಿಸಿ ಹಾಡಿದರು.
ಸಾಹಿತಿ ಕವಿ ವಕೀಲರು ಕುರುವಳ್ಳಿ ತಿಮ್ಮಯ್ಯ ಅವರು ಮಾತನಾಡಿವಿಶಿಷ್ಟವಾದ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಚಲಾಯಿಸಬೇಕು ತಮ್ಮ ಕವನದ ಮುಖಾಂತರ ಹೇಳಿದರು. ತಪ್ಪದೆ ಮತದಾನ ಮಾಡಬೇಕು ಎಂದರು.
ಪತ್ರಕರ್ತ ಮಾರೆಪ್ಪ ನಾಯಕ ಮತ್ತು ಮಲ್ಲಯ್ಯ ತಾಲೂಕು ಪಂಚಾಯತ್ ಅಧಿಕಾರಿ ವೀರಯ್ಯ ಅವರು ಮತದಾನದ ಸಂವಿಧಾನದ ಹಕ್ಕನ್ನು ಅರ್ಹ ಮತದಾರರು ಶೇಕಡ 100ರಷ್ಟು ವಾಗಲಿ ಎಂದು ಮತದಾರರಲ್ಲಿ ತಮ್ಮ ಕವನದ ಮೂಲಕ ಅರಿವು ಮೂಡಿಸಿದರು ಈ ಸಂದರ್ಭದಲ್ಲಿ ಅಬ್ದುಲ್ ನಬಿ ಸೇರಿದಂತೆ ಕವಿಗಳಿಗೆ ಪುಸ್ತಕ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.