WhatsApp Image 2024-04-25 at 2.55.50 PM

ಮತಗಟ್ಟೆ ತನಿಖಾ ಠಾಣೆಗಳಿಗೆ ವೀಕ್ಷಕರಾದ ಹೇಮಾ ಪುಷ್ಪ ಶರ್ಮಾ ಭೇಟಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 25- ವಿಧಾನಸಭಾ ಮತಕ್ಷೇತ್ರದ ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನಕ್ಕಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ವೀಕ್ಷಕರದ ಹೇಮಾ ಪುಷ್ಪ ಶರ್ಮಾ ತಾಲೂಕಿನ ಇಬ್ರಾಹಿಂಪುರ್ ಗ್ರಾಮದ ತನಿಖಾ ಠಾಣೆಗೆ ಭೇಟಿ ತನಿಖಾ ಕಾರ್ಯವನ್ನು ಪರಿಶೀಲನೆ ಮಾಡಿದರು.

ಇಬ್ರಾಹಿಂಪುರ ಗ್ರಾಮದಲ್ಲಿ ಮಾಡಲಾಗಿರುವ ಮತಗಟ್ಟೆಗಳ ಸಂಖ್ಯೆ 39ಹಾಗೂ40ಕ್ಕೆ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳು ಹಾಗೂ ವಿಶ್ರಾಂತಿ ಕೊಠಡಿಯನ್ನು ಪರಿಶೀಲನೆ ನಡೆಸಿದರು.

ಸಿರುಗುಪ್ಪ ಸಹಾಯಕ ಚುನಾವಣಾ ಅಧಿಕಾರಿ ಡಾ ಎಂ ತಿರುಮಲೇಶ್ ತಹಸಿಲ್ದಾರ್ ಶಂಸೇ ಆಲಂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪವನ್ ಕುಮಾರ್ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ ಕಂದಾಯ ನಿರೀಕ್ಷಕ ಮಂಜುನಾಥ ಅಬ್ದುಲ್ ನಬಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಮತ್ತಿತರರು ಜೊತೆಗಿದ್ದರು.

Leave a Reply

Your email address will not be published. Required fields are marked *

error: Content is protected !!