WhatsApp Image 2024-06-21 at 12.33.33 PM (1)

ಮನುಷ್ಯ ಮನುಷ್ಯರಾಗಿ ಬದುಕುವ ವಿಧಾನವನ್ನು ತಿಳಿಸಿಕೊಡುವ ಮಹತ್ವದ

ಸರಳ ತಪಸ್ಸೇ ಯೋಗ : ಡಾ ಬಸವರಾಜ್ ಕ್ಯಾವಟರ

ಕರುನಾಡ ಬೆಳಗು ಸುದ್ದಿ

10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಕೆಎಸ್ ಆಸ್ಪತ್ರೆ ಮತ್ತು ಕೆಎಸ್ ನರ್ಸಿಂಗ್ ಕಾಲೇಜ್ ವತಿಯಿಂದ ಹಾಗೂ ವಿಜಯವಾಣಿ ಸಂಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಚೈತನ್ಯಾನಂದ ಮಹಾಸ್ವಾಮಿಗಳು ರಾಮಕೃಷ್ಣ ಆಶ್ರಮ ಮಾತನಾಡಿ ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ ಎಂದರು

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ ಬಸವರಾಜ್ ಕ್ಯಾವಟರ ಮಾತನಾಡಿ ಮನುಷ್ಯ ಮನುಷ್ಯರಾಗಿ ಬದುಕುವ ವಿಧಾನವನ್ನು ತಿಳಿಸಿಕೊಡುವ ಮಹತ್ವದ ಸರಳ ತಪಸ್ಸೇ ಯೋಗ .ʻಅಹಂʼನಿಂದ ʻಸ್ವಯಂʼ ಕಡೆಗೆ ಹೋಗುವ ಮಾರ್ಗವೇ ಯೋಗ !. ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ ಭಾರತದ ಪುರಾತನ ಸಂಪ್ರದಾಯವಾದ ಯೋಗವಿಂದು ವಿಶ್ವದೆಲ್ಲೆಡೆ ಉತ್ಸವವಾಗಿ ಆಚರಿಸಲ್ಪಡುತ್ತಿದೆ ಎಂದು ತಿಳಿಸಿದರು.

ಯೋಗ ತರಬೇತಿದಾರರಾದ ಡಾ ಭಾಗ್ಯಶ್ರೀ ಪ್ರತಿಯೊಂದು ಆಸನಗಳ ಮಹತ್ವ ಮತ್ತು ಆಸನಗಳ ಮಾಡುವ ವಿಧಾನಗಳನ್ನು ಆಸನಗಳನ್ನು ಮಾಡಿಸುವುದರ ಮೂಲಕ ಪಾಲ್ಗೊಂಡಿದ್ದ ಎಲ್ಲರಿಗೂ ಸ್ಪಷ್ಟವಾಗಿ ತಿಳಿಯಪಡಿಸಿದರು.

ಯೋಗ ತರಬೇತಿದಾರರಾದ ಕುಮಾರ್ ಗಣೇಶ್ ಯೋಗಾಸನಗಳನ್ನು ಮಾಡಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಶ್ರೀ ವಿಕೆ ರವೀಂದ್ರ, ವಿ ಬಿ ಅಂಗಡಿ ಲೆಕ್ಕಪರಿಶೋಧಕರು, ವಿನೋದ್ ಕುಮಾರ್ ದೈಹಿಕ ನಿರ್ದೇಶಕರು, ಶ್ರೀಮತಿ ಗೀತಾ ನ್ಯಾಷನಲ್ ಪ್ಯಾರಾಮೆಡಿಕಲ್ ಕಾಲೇಜ್ ಪ್ರಾಚಾರ್ಯರು. ಡಾಕ್ಟರ್ ಸುಮಾ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ಶ್ರೀ ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ ಅವರು ಮಾಡಿದರು.

ಯೋಗಾಸನದಲ್ಲಿ ಪಾಲ್ಗೊಂಡ ಅತ್ಯಂತ ಹಿರಿಯ ವ್ಯಕ್ತಿ ಶ್ರೀ ಕಲ್ಲಯ್ಯ ವಿವೇಕಿ ಅವರಿಗೆ ಗೌರವಿಸಲಾಯಿತು. ಶ್ರೀ ಗವಿಸಿದ್ದೇಶ್ವರ ಕಾಲೇಜಿನ ವಿದ್ಯಾರ್ಥಿಗಳಿಂದ ಯೋಗಾಸನ ಡ್ಯಾನ್ಸ್ ನೆರವೇರಿತು ಕೆಎಸ್ ಆಸ್ಪತ್ರೆಯ ಸಿಬ್ಬಂದಿಗಳು, ಪ್ಯಾರಾ ಮೆಡಿಕಲ್ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ನ್ಯಾಷನಲ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಯೋಗಾಸನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಂದನಾರ್ಪಣೆಯನ್ನು ಕೆ ಎಸ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಲಕ್ಷ್ಮಿ ನಾರಾಯಣ ಅವರು ನಿರ್ವಹಿಸಿದರು.

ಶ್ರೀ ವಿಶ್ವನಾಥ್, ಶ್ರೀಮತಿ ಪೂರ್ಣಿಮಾ, ಶ್ರೀ ಲಕ್ಷ್ಮೀನಾರಾಯಣ, ದೀಪಕ ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!