0a9da748-3866-40fb-8fd2-d39985949838

ಯಾಪಲದಿನ್ನಿ : ಮಹಷಿ೯ ವಾಲ್ಮೀಕಿ ಜಯಂತಿ

ಯುವಕರು ದಾಶ೯ನಿಕರ ಆದರ್ಶ ಪಾಲಿಸಿ : ಜೋಶಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 27 – ಇಂದಿನ ಯುವಕರು ಮತ್ತು ಪ್ರತಿಯೊಬ್ಬರು ದೇಶದ ಮಹಾತ್ಮರ.ದಾಶ೯ನಿಕರ.ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಾಘವೇಂದ್ರ ಜೋಶಿ ಹೇಳಿದರು.
ತಾಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಯುವ ಮುಖಂಡ ಅಪ್ಪಣ್ಣ ಜೋಶಿ ಮಾತನಾಡಿ ಮಹರ್ಷಿ ವಾಲ್ಮೀಕಿ ಯವರು ಮೊಟ್ಟ ಮೊದಲ ಆದಿ ಕವಿ ಮಹರ್ಷಿ ವಾಲ್ಮೀಕಿಯವರು ಅಂತಹ ಸಮಾಜದಲ್ಲಿ ಹುಟ್ಟಿದ ನೀವೂಗಳು ನಿಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೂಡಿಸಬೇಕು. ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ ಮಕ್ಕಳ ನೇ ಆಸ್ತಿಯನ್ನಾಗಿ ಮಾಡಬೇಕು. ಶ್ರೀ,ಮಹರ್ಷಿ ವಾಲ್ಮೀಕಿ ಯವರ ತತ್ವ ಆದರ್ಶಗಳನ್ನು , ಎಲ್ಲರೂ ಮೈಗೂಡಿಸಿ ಕೊಳ್ಳಬೇಕು ಎಲ್ಲಾ ಸಮಾಜದವರೂಂದಿಗೆ ಉತ್ತಮ ಬಾಂಧವ್ಯ ಹೊಂದಿ. ಸಹೋದರಂತೆ ಬಾಳಬೇಕು ಎಂದು ಸಮಾಜದವರಿಗೆ ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಯುವ ಮುಖಂಡ ಮತ್ತು ಪತ್ರಕರ್ತ ಶ್ರೀಕಾಂತಗೌಡ ಮಾಲಿ ಪಾಟೀಲ್ ಮಾತನಾಡಿ ವಾಲ್ಮೀಕಿ ಜನಾಂಗಕ್ಕೆದ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಆದರೆ ನಮ್ಮ ಗೆ ಯಾವುದೇ ಸೌಲಭ್ಯಗಳು ದೊರಯುತ್ತಿಲ್ಲ.ಇದಕ್ಕೆ ಕಾರಣ ನಮ್ಮ ಸಮುದಾಯದವರು ಶಿಕ್ಷಣದಿಂದ ಹಿಂದೆಯಿದ್ದಾರೆ ನಾವು ಮೂದಲು ಶಿಕ್ಷಣದಲ್ಲಿ ಮುಂದೆ ಬರಬೇಕು ಅಂದಾಗ ಮಾತ್ರ ಸಮಾಜ ಅಭಿವೃದ್ದಿ ಹೊಂದಲು ಸಾದ್ಯ ಶಿಕ್ಷಣದಿಂದ ಪ್ರತಿಭೆಯನ್ನು ಗುರುತಿಸಲು ಶಿಕ್ಷಣಕ್ಕೆ ಒತ್ತುಕೊಡಬೇಕು ಪ್ರಜ್ವಲಿಸುವ ವಾಲ್ಮೀಕಿಯಂತ ಮಹಾತ್ಮರ ದಾರ್ಶನಿಕರ ತತ್ವ ಸಿದ್ದಾಂಥಗಳನ್ನುನಾವೂ ನೀವೂ ಅಳವಡಿಸಿಕೊಳ್ಳಬೇಕು ಜದಾರ್ಶನಿಕರು ಕೇವಲ ಒಂದೇ ಸಮುದಾಯಕ್ಕೆ ಸೀಮಿತರಾದವರಲ್ಲಾ ಮಹಾತ್ಮ ತತ್ವ ಆದರ್ಶಗಳು ಜೀವನದಲ್ಲಿ ಅಳವಡಿಸಿಕೂಂಡು ಮುಂದೆ ಸಾಗಬೇಕುಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ದೇವಸ್ಥಾನದಿಂದ ಹುತ್ತದ ವರಗೆ ಸಾಗಿ ಹುತ್ತಕ್ಕೆ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ರಾಜ ಬೀದಿಗಳ ಮುಖಾಂತರ ಮಹಿಳೆಯರು ಕುಂಭ ಕಳಸ ಕನ್ನಡಿ. ಸಕಲವಾದ್ಯ ಮೇಳದೊಂದಿಗೆ ಮೇರವಣಿಗೆ ಸಾಗಿ ನಂತರ ವೇದಿಕೆ ಬಂದು ತಲುಪಿತು.
ಕಾರ್ಯಕ್ರಮದಲ್ಲಿ  ಜಕಳಕಯ್ಯ ಹಿರೇಮಠ,ಅವರು ಸಮಾರಂಭದ ಸಾನಿಧ್ಯ ವಹಿಸಿದ್ದರು ಈ ಸಂದರ್ಭದಲ್ಲಿ ಜಿ. ಪಂ ಮಾಜಿ ಸದಸ್ಯ ಮಹೇಶ ಹಳ್ಳಿ,ದೇವೇಂದ್ರಗೌಡ,ಹನಮಗೌಡ ಪಾಟೀಲ್,ತಾ.ಪಂ ಮಾಜಿ ಸದಸ್ಯ ಹೋಳೆಗೌಡ ಪೋಲೀಸ್ ಪಾಟೀಲ್ ,ಭೀಮನಗೌಡ ತಾಳಕೇರಿಬನ್ನೇಪ್ಪ ವಾಲ್ಮೀಕಿ ಅಜುರುದ್ಧಿನ್ ಕುಷ್ಠಗಿ,ಖಾಸಿಂ ಅಲಿಗುಬ್ಬಿ ಗ್ರಾಮ ಪಂಚಾಯತ ಸದಸ್ಯರುಗಳಾದ, ಪಾರ್ವತಿ ಕನಾಕಚಲ ವಾಲ್ಮೀಕಿ.ರೇಣುಕವ್ವ ಹನಮಂತಪ್ಪ ಮಾಟರಂಗಿ,ಶರಣಪ್ಪ ಹರಿಜನ,ಗ್ರಾಮದ ಮುಖಂಡರಾದ ಪ್ರಭುದೇವ ಮೇಟಿ, ಶಂಕ್ರಗೌಡ ಪೋಲೀಸ್ ಪಾಟೀಲ್, ಹನಮಂತಪ್ಪ ದಿಪಾಲಿ,ಸಂಗಪ್ಪ ಹಟ್ಟಿ,ಯಮನೂರಪ್ಪ ದಿಪಾಲಿ, ಹನಮಂತಪ್ಪ ಕವಳಕೇರಿ,ತಿಮ್ಮನಗೌಡ ಪೋಲೀಸ್ ಪಾಟೀಲ್.ಗಣೇಶ ಪೂಜಾರ, ಸುರೇಶಗೌಡ ಪೋಲೀಸ್ ಪಾಟೀಲ್,ಶಿವನಪ್ಪ ಪೂಜಾರ,ಬಸಣ್ಣ ಹಟ್ಟಿ‌ ಬಸವರಾಜ ಹಟ್ಟಿ,ಬಾಷಾಸಾಬ ಮುಲ್ಲಾರ ಹುಸೇನ್ ಸಾಬ ಗಿರಣಿ. ಯಂಕಪ್ಪ ದಾಸರ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!