ಸಂವಿಧಾನ ನಮಗೆ ಸರ್ವ ಶ್ರೇಷ್ಠ ಗ್ರಂಥ
ಮುಖ್ಯ ಶಿಕ್ಷಕ ದೇವೇಂದ್ರಪ್ಪ ಜಿರ್ಲಿ ಅಭಿಪ್ರಾಯ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, ೨೭- ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ರಚಿಸಿದವು ಇತರ ದೇಶಗಳಿಗೆ ಮಾದರಿಯಾಗಿದೆ ಎಂದು ಮುಖ್ಯಗುರುಗಳಾದ ದೇವಿಂದ್ರಪ್ಪ ಜಲಿ೯ ಅವರು ಹೇಳಿದರು.
ತಾಲೂಕಿನ ತಾಳಕೇರಿ ಸರಕಾರಿ ಪ್ರೌಢಶಾಲೆ ನವಂಬರ್ 26 ರ ಪ್ರಯುಕ್ತ ಭಾರತದ ಸಂವಿಧಾನ ಅಂಗೀಕೃತವಾದ ದಿನದ ಸವಿನೆನಪಿನಲ್ಲಿ ಸಂವಿಧಾನದ ಪೀಠಿಕೆಯನ್ನು ಪ್ರತಿಜ್ಞಾವಿಧಿಯಾಗಿ ಬೋಧಿಸುವ ಮೂಲಕ ಅರ್ಥಪೂರ್ಣ ಸಂವಿಧಾನ ದಿನಾಚರಣೆ ಆಚರಿಸಲಾಯಿತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಭಾರತದ ಭದ್ರ ಅಡಿಪಾಯವಾಗಿರುವ ಸಂವಿಧಾನದ ಮೂಲ ಆಶಯ ಹಾಗೂ ಸಂವಿಧಾನದ ಪೀಠಿಕೆಯ ಸಾರಾಂಶವನ್ನು ಮುಖ್ಯೋಪಾಧ್ಯಾಯ ದೇವೇಂದ್ರ ಜಿರ್ಲಿ ಮಕ್ಕಳಿಗೆ ವಿವರಿಸುತ್ತಾ ಈ ದೇಶದ ರಾಜ್ಯಾಂಗ,ನ್ಯಾಯಾಂಗ ಮತ್ತು ಕಾರ್ಯಾಂಗಗಳು ಸಂವಿಧಾನ ನಮಗೆ ನೀಡಿರುವ ಶಾಸನಬದ್ಧ ಹಕ್ಕುಗಳನ್ನು ಜಾರಿಗೊಳಿಸಲು ಕಾರ್ಯಪ್ರವೃತ್ತವಾಗಿವೆ .
ದೇಶದ ಎಲ್ಲಾ ನಾಗರಿಕರಿಗೂ ಸಮಬಾಳು ಸಮಪಾಲು ನೀಡುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದು.ಎಲ್ಲರಿಗೂ ಸಮಾನವಾದ ಅವಕಾಶಗಳು ಮತ್ತು ಹಕ್ಕುಗಳನ್ನು ಕೊಡ ಮಾಡಿದೆ.ಸಂವಿಧಾನದ ರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ.ಸಂವಿಧಾನದ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮತ್ತು ಜಾಗೃತಿ ಮೂಡಿಸಲು ಸಂವಿಧಾನ ದಿನಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಅಥಿತಿ ಶಿಕ್ಷಕರುಗಳಾದ ಮಂಜುಳಾ ತಾಳಕೇರಿ. ವಿಜಯಲಕ್ಷ್ಮಿ ಬ್ಯಾಳಿ, ಮಂಜುನಾಥ ಕೋಳೂರು,ಸಿಬ್ಬಂದಿಗಳಾದ ಚಂದ್ರಶೇಖರ ಕರಬಟ್ಟಿ, ಶಾರದಾ ಹರ್ಲಾಪೂರ,ಹಾಗೂ ವಿದ್ಯಾರ್ಥಿಗಳು ಮತ್ತು ಇತರರು ಭಾಗವಹಿಸಿದ್ದರು
