WhatsApp Image 2024-02-10 at 10.16.33 PM

ರಾಜಶೇಖರ್ ಹಿಟ್ನಾಳಗೆ ವಾಲ್ಮೀಕಿ ಗುರುಪೀಠದಿಂದ ಸನ್ಮಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,11- ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ ಕೆ. ರಾಜಶೇಖರ್ ಹಿಟ್ನಾಳ ಅವರನ್ನು ಹರಿಹರ ತಾಲೂಕ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಜಾತ್ರೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಾಲ್ಮೀಕಿ ಗುರುಪೀಠದಲ್ಲಿ ಕಳೆದ ಆರು ವರ್ಷಗಳಿಂದ ಹಮ್ಮಿಕೊಂಡಿರುವ ವಾಲ್ಮೀಕಿ ಜಾತ್ರೆ ಬಹಳ ವಿಶೇಷ ಮನ್ನಣೆ ಪಡೆಯುತ್ತಿದ್ದು, ಅರ್ಧ ಕೋಟಿ ಇರುವ ವಾಲ್ಮೀಕಿ ಸಮಾಜದ ವಿಶೇಷ ಕಾರ್ಯಕ್ರಮವಾಗಿದೆ, ಫೆ. ೮ ಮತ್ತು ೯ ರಂದು ನಡೆಯುವ ಜಾತ್ರೆಯಲ್ಲಿ ಪಾಲ್ಗೊಂಡ ರಾಜಶೇಖರ್ ಹಿಟ್ನಾಳ ಅವರ ಬಗ್ಗೆ ಅಪಾರ ಪ್ರೀತಿ ಹೊಂದಿರುವ ವಾಲ್ಮೀಕಿ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಸನ್ಮಾನಿಸಿ ಬರುವ ದಿನಗಳಲ್ಲಿ ವಾಲ್ಮೀಕಿಯ ಅನುಗ್ರಹವಾಗಲಿ ಎಂದು ಶುಭ ಕೋರಿದರು.

ಈ ವೇಳೆ ಮಠದ ಬೃಹತ್ ಯಾಂತ್ರಿಕ ಮಾನವರಹಿತ ಚಾಲನೆಗೊಳ್ಳುವ ದೇಶದ ಏಕೈಕ ಎನ್ನಲಾದ ತೇರು ಮತ್ತು ಮಠವನ್ನು ನೋಡಿ ಸಂತಸವ್ಯಕ್ತಪಡಿಸಿದ ರಾಜಶೇಖರ್ ಅವರು ಕಾಣಿಕೆ ಸಲ್ಲಿಸಿ ಅಲ್ಲಿಯೇ ಸಾಮಾನ್ಯರೊಂದಿಗೆ ಪ್ರಸಾದ ಸ್ವೀಕರಿಸಿದರು.
ಜಿಲ್ಲೆಯಿಂದ ಜಾತ್ರೆಯಲ್ಲಿ ಅಥಿತಿಗಳಾಗಿ ಪಾಲ್ಗೊಂಡಿದ್ದ ಸಮಾಜದ ಜಿಲ್ಲಾಧ್ಯಕ್ಷ ಟಿ.ರರತ್ನಾಕರ, ಧರ್ಮದರ್ಶಿ ರಾಮಣ್ಣ ಕಲ್ಲನವರ, ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ, ಮುಖಂಡರುಗಳಾದ ರಾಮಣ್ಣ ಚೌಡಕಿ, ಶಿವಮೂರ್ತಿ ಗುತ್ತೂರ, ಭರಮಣ್ಣ ನಗರ, ಗವಿಸಿದ್ದಪ್ಪ ಕಲ್ಲನವರ, ಶೇಖರಪ್ಪ ಗಿಣಗೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!