WhatsApp Image 2024-02-11 at 8.55.50 AM

ಗ್ರಾಮ ಚಲೋ ಅಭಿಯಾನ : ಮನೆ ಮನೆಗೆ ಬಿಜೆಪಿ, ಮನ ಮನಕ್ಕೆ ಮೋದಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,11- ನಗರದಲ್ಲಿ 5 ವಾರ್ಡಿನ  ಮುಂಡರಗಿ ಯಲ್ಲಿ 257,258,259 ಬೂತ್ ಕಮಿಟಿಯ ಸದಸ್ಯರು ಹಾಗೂ ಬೂತ್ ಪ್ರಮುಖರ ಸಭೆಸೇರುವ ಮೂಲಕ ಗಾವ್ ಚಲೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬೂತ್ ಕಮಿಟಿ ಸದಸ್ಯರಲ್ಲಿ ಹೊಸ ಹುರುಪು ಹುಮ್ಮಸ್ಸು ಮೂಡಿಸಿ ಪಕ್ಷ ಸೂಚಿಸಿದ ಕಾರ್ಯಕ್ರಮಗಳನ್ನು ಯಶಸ್ವಿ ಮಾಡುವ ಮೂಲಕ ಪಕ್ಷ ಬಲವರ್ಧನೆಗೆ ಶ್ರಮಿಸಬೇಕೆಂದು ಕೋರಲಾಯಿತು.

ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಯನ್ನು ಗೆಲ್ಲೆಸಿ ದೇಶ ಸೇವೆಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕಾಗಿ ಮನವಿ ಸಲ್ಲಿಸಿ ಪ್ರತಿ ಮನೆ ಮನೆಗೆ ಕರಪತ್ರ ನೀಡಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ವಿವರಿಸಲಾಯಿತು.

ಮುಂಡರಗಿಯಲ್ಲಿ ವಾಸ್ತವ್ಯ ಮಾಡಿ ಪ್ರತಿ ಬೂತ್ ಸಭೆ ಮಾಡಲಾಯಿತು. ಬೂತ್ ಕಮಿಟಿ ಮತದಾರರ ಪಟ್ಟಿ ಪರಿಷ್ಕರಣೆ ಹೊಸ ಮತದಾರರ ಸೇರ್ಪಡೆ ನಮೋ ಅಪ್ಲಿಕೇಶನ್ ಸರಳ ಅಪ್ಲಿಕೇಶನ್ ಬಗ್ಗೆ ಮಾಹಿತಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ  ಸೋಮಶೇಖರ ರೆಡ್ಡಿ, ಶ್ರೀನಿವಾಸ್ ಮೋತ್ಕರ್, ಮಹಾನಗರ ಪಾಲಿಕೆಯ ಸದ್ಯಸ್ಯ ವೀರಶೇಖರ್ ರೆಡ್ಡಿ, ಸಂಚಾಲಕರು ಗ್ರಾಮ ಚಲೋ ತಿಮ್ಮಪ್ಪ, ಹಿರಿಯ ನಾಯಕರು ವೆಂಕಟೇಶ್, ಗೋವಿಂದ, ವಸಂತ್ ರಾವ್, ರಮೇಶ್, ಫಿರೋಜ್ ಖಾನ್, ರಮೇಶ್ ಯಾದವ್, ಕೆ.ನಾಗರಾಜ್ ಮುಂಡರಗಿ, ಸೀನಪ್ಪ, ಭೋಜರಾಜ, ಸುರೇಶ್ ರೆಡ್ಡಿ, ಕಂಡ್ರಬಾಬು, ಬೂತ್ ನ ಎಲ್ಲಾ ಕಮಿಟಿ ಸದಸ್ಯರು, ಮುಖಂಡರು, ಗ್ರಾಮಸ್ಥರು. ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!