ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್ ಚುನಾವಣೆ
ರಾಜಶೇಖರ ಆಡೂರ ತಂಡಕ್ಕೆ ಭರ್ಜರಿ ಬಲ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,೦೮– ನಗರದ ಪ್ರತಿಷ್ಠಿತ ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ–ಆಪ್ ಬ್ಯಾಂಕ್ ಗೆ ರಾಜಶೇಖರ ಆಡೂರ ಪ್ಯಾನಲ್ ನ ಎಲ್ಲ 13 ಸ್ಪರ್ಧಿಗಳು ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ರಾಜಶೇಖರ ಪ್ಯಾನಲ್ ನಲ್ಲಿ ರಾಜಶೇಖರ ಆಡೂರು, ಗವಿಸಿದ್ದಪ್ಪ ತಳಕಲ್, ವಿಶ್ವನಾಥ ಅಗಡಿ, ಬಸಯ್ಯ ಹಿರೇಮಠ, ಬಸವರಾಜ ಶಹಪುರ, ರಾಜೇಂದ್ರಕುಮಾರ ಶೆಟ್ಟರ, ರಮೇಶ ಕವಲೂರು, ಸೈ ಶಹನಾಜ್ ಬೇಗಂ, ಮಲ್ಲಿಕಾರ್ಜುನ ಪಾಟೀಲ್, ಬಾಬಾ ಅರಗಂಜಿ, ಶ್ರೀಶೈಲಪ್ಪ ಅಂಗಡಿ, ನಾಗರಾಜ ಅರಕೇರಿ, ಕಣ್ಣಿ ಪೂಜಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಮುಂಚೆ ಸಾಮಾನ್ಯ ಕ್ಷೇತ್ರಕ್ಕೆ ಹಾಲಯ್ಯ ಹುಡೇಜಾಲಿ, ರುದ್ರಗೌಡ ಪಾಟೀಲ್, ಗವಿಸಿದ್ದಪ್ಪ ಮುದುಗಲ್, ಉಮೇಶ ಚಕ್ಕಿ, ಹಾಗೂ, ಹಿಂ. ವ. ಅ ಕ್ಷೇತ್ರದಲ್ಲಿ ಆರ್.ಎಂ ಷರೀಫ್ ನಾಮಪತ್ರ ಸಲ್ಲಿಸಿದ್ದರು.
ಆದರೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಇಂದು ಈ ಎಲ್ಲ ಐವರು ನಾಮಪತ್ರ ವಾಪಸ್ ಪಡೆದಿದ್ದು ಆಡೂರು ಬಣದ ಆಡೂರು ಸೇರಿ ಎಲ್ಲ 13 ಸ್ಪರ್ಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪ್ರಕಟಣೆಯಲ್ಲಿ ಘೋಷಣೆ ಮಾಡಿದ್ದಾರೆ.
ನಿರ್ದೇಶಕರ ಅವಧಿ 5 ವರ್ಷ. ಅವಿರೋಧ ಆಯ್ಕೆ ಆಗದೆ ಇದ್ದಲ್ಲಿ ಇದೆ ಸೆ. 14 ರಂದು ಶಾರದಮ್ಮ ಕೊತಬಾಳ ಕಾಲೇಜಿನಲ್ಲಿ ( ಗವಿಮಠ ರಸ್ತೆ) ಬೆಳಗ್ಗೆ 9 ರಿಂದ ಮಧ್ಯಾಹ್ನ 4 ವರೆಗೆ ಮತದಾನ ನಡೆಯುತ್ತಿತ್ತು.
ಸನ್ಮಾನ : ಅವಿರೋಧ ಆಯ್ಕೆಯಾಗಿ ಸದಸ್ಯರುಗಳಿಗೆ ಯುವ ಮುಖಂಡರಾದ ಶಿವಕುಮಾರ ಕುಕನೂರ, ಮಂಜುನಾಥ ಅಂಗಡಿ,ರಮೇಶ ತುಪ್ಪದ್, ಶ್ರೀನಿವಾಸ ಹ್ಯಾಟಿ, ಅಶೋಕ ಕುಂಬಾರ, ಶರಣು ಡೋಳ್ಳಿನ್, ಸುದಾಕರ ಮುಜಗುಂಡ, ವಿನೋದ ಡೊಳ್ಳಿನ್ ಇತರರು ಇದ್ದರು.

