WhatsApp Image 2024-06-20 at 6.01.01 PM

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ : ಹಾಲಪ್ಪ ಆಚಾರ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 20- ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ವಿದ್ಯುತ, ಬಾಂಡ್, ಸಬ್ ರಿಜಿಸ್ಟರ್, ಅಬಕಾರಿ ಇನ್ನೂ ಹಲವಾರು ದರಗಳನ್ನು ಹೆಚ್ಚಿಸಿ ಜನಸಾಮಾನ್ಯರ ಹೂಟ್ಟೆಯ ಮೇಲೆ ಬರೆ ಎಳ್ಳದಂತಾಗಿದೆ ಅವರ ಬದುಕಿನ ಜೊತೆ ಚಲಾಟವಾಡುತ್ತದೆ ಅತಿ ಹೆಚ್ಚು ಬ್ರಷ್ಟಾಚಾರ ಮಾಡಿದ ನಾಲಾಯಕ್ ಸರಕಾರವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಬಿಜೆಪಿ ಪಕ್ಷದ ಕಛೇರಿಯಿಂದ ಪ್ರತಿಭಟನೆಕಾರರು ಕಾಂಗ್ರೆಸ್ ಸರಕಾರ ಪ್ರಟೋಲ್.ಡೀಜಲ್.ದರ ಹೆಚ್ಚಿಸದ ನೀತಿ ಖಂಡಿಸಿ ಸರಕಾರ ವಿರುದ್ಧ ಧಿಕಾರ್ ಕುಗ್ಗುತಾ ಪಟ್ಟಣದ ಪ್ರಮುಖ ರಾಜ ಬೀದಿಗಳ ಮುಖಾಂತರ ರಾಣಿ ಕಿತ್ತೋರ ಚೆನ್ನಮ್ಮ ಸಕ೯ಲ್ ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಒಟ್ಟುಕೂಡಿ ಸರಕಾರ ತೈಲ ಬೆಲೆ ಏರಿಕೆ ಕುರಿತು ಜನ ನೀತಿ ವಿರೋಧಿಸಿ ಪ್ರತಿಭಟನೆಕಾರರು ಮಾಜಿ ಸಚಿವ ಹಾಲಪ್ಪ ಆಚಾರ ನೇತೃತ್ವವ ಮುಖಾಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು ಸರಕಾರದ ವಿವಿಧ ನಿಗಮ ಮಂಡಳಿಯ ಅನುದಾನ ವಿವಿಧ ಯೋಜನೆಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಯಗಳಿಗೆ ದುಬ೯ಳಿಕೆ ಮಾಡಿಕೊಳ್ಳುವ ಮೂಲಕ ಇವರು ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ ಯಾವುದೇ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ ಗ್ಯಾರಂಟಿ ಗುಂಗಿನಲ್ಲಿರುವ ಅಭಿವೃದ್ಧಿ ಶೂನ್ಯ.ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನೀತಿಯನ್ನು ಹಿಂಪಡೆದುಕೂಳ್ಳಬೇಕು ಎಂದು ಹೇಳಿದರು ಇದಕ್ಕೆ ಎಚ್ಚತುಕೂಂಡು ಎಲ್ಲಾ ಬೆಲೆಗಳನ್ನು ಇಳಿಕೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಪೆಟ್ರೋಲ್ ಡೀಸೆಲ್ ದರ ಏರಿಕೆಯನ್ನು ಖಂಡಿಸಿ, ನಗರದ ಕೀತ್ತೂರ ರಾಣಿ ಚನ್ನಮ್ಮ ವೃತ್ತದ ಮುಂಭಾಗದಿಂದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಸೇರಿ ಕಾಂಗ್ರೆಸ್ ಸರಕಾರದ ವಿರುದ್ದ ದಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿತ್ತಾ ಸಿದ್ದರಾಮಯ್ಯ ನವರ ಪ್ರಕೃತಿ ಧನಹ ಮಾಡಿ ಟೈರ ಸುಟ್ಟು ರಸ್ತೆ ಬಂದ ಮಾಡಿದ ಪ್ರತಿಭಟನೆ ನೆಡೆಸಿ ಅಸಮದಾನ ವ್ಯಕ್ತ ಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ ಮಾಜಿ ಸಚಿವರು ವಹಿಸಿಕೊಂಡಿದ್ದರು ರಾಜ್ಯ ಕಾಂಗ್ರೇಸ ಸರಕಾರ ಅಧಿಕಾರಕ್ಕೆ ಬಿಟ್ಟಿ ಬಾಗ್ಯಗಳ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದು ಸರಕಾರ ನೆಡೆಸಲು ಹಣವಿಲ್ಲದೆ ಜನಸಾಮಾನ್ಯರ ಮೇಲೆ ಬರಿ ಹಾಕಿ ಡೀಸೆಲ್‌ 3.5 ಪೆಟ್ರೋಲ್ 3 ರೂಪಾಯಿ ಹೆಚ್ಚಿಸುದಲ್ಲದೆ ಪಾಹಣಿ, ಸ್ಟಾಂಪು, ಮದ್ಯದ ದರ, ಜಾತಿ ಆದಾಯ , ನೋಂದಣಿ ಶುಲ್ಕ ದಿನಸಿಬಳಕೆ ವಸ್ತುಗಳ ಬೆಲೆ ಏರಿಕೆಯಿದ ಸಾರ್ವಜನಿಕರು ತತ್ತರಿಸಿದ್ದಾರೆ ಸಿದ್ದರಾಮಯ್ಯ ಸರಕಾರ ಪತನವಾಗೂವರಗು ಉಗ್ರ ಹೊರಾಟ ಮಾಡುತ್ತೆವೆಂದರು ಇದು ನಾಲಾಯಕ ಸರಕಾರವಾಗಿದೆ ಬೆಲೆ ಏರಿಕೆ ಮಾಡಲು ಕ್ಷೇತ್ರದ ಶಾಸಕರನ್ನು ಆರ್ಥಿಕ ಸಲಹೆ ಗಾರನ್ನು ನೇಮಕ ಮಾಡಿರುವದು ನಾಚಿಗೇಡು ಎಂದು ಅಸಮಾದಾನ ವ್ಯಕ್ತಿ ಪಡಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ನವಿನ ಗುಳಗಣ್ಣನವರು ಮಾತನಾಡಿ ಲೋಕ ಸಭೆ ಚುನಾವಣೆ ಪಲಿತಾಂಶ ಬಂದ ತಕ್ಷಣವೇ ಕಾಂಗ್ರೆಸ್ ಸರಕಾರದ ಡೀಸೆಲ್ , ಪೆಟ್ರೋಲ್ ಬೆಲೆ ಏರಿಸಿ ಅಸಲಿ ಮುಖ ಗೊತ್ತಾಗಿದೆ ಸರಕಾರದಲ್ಲಿ ಹಣವಿಲ್ಲದೆ ಬೆಂಗಳೂರನಲ್ಲಿ 25 ಸಾವಿರ ಎಕ್ಕರೆ ಜಮೀನು ಮಾರಿ ರಾಜ್ಯದ ಬೊಕ್ಕಸವನ್ನು ತುಂಬಿಸಿಕೊಳಳಲು ಹೊರಟಿದೆ ಆರ್ಥಿಕ ದಿವಾಳಿಯಾಗಿದೆ ಸರಕಾರದಲ್ಲಿ ಎಷ್ಟೊ ಆಯ್ ಎ ಎಸ್ ಅಧಿಕಾರಗಳು ಇದ್ದರು ಆರ್ಥಿಕ ಸಲಹೇ ನೀಡಲು ಖಾಸಗಿ ಸಂಸ್ಥೆ ನೇಮಕ ಮಾಡಿದ್ದಾರೆ ಸಿದ್ದರಾಮಯ್ಯನವರು 14 ಸಲ ಬಜೆಟ್ ಮಂಡಿಸಿದರು ರೈತರ ಮತ್ತು ಬಡವರ ಹಿತ ಕಾಪಾಡುವಲ್ಲಿ ವಿಫಲ. ಪಿಕ್ ಪಾಕೆಟ್ ಸರಕಾರವಾಗಿದೆ.

Leave a Reply

Your email address will not be published. Required fields are marked *

error: Content is protected !!