ರಾಜ್ಯ ಮಟ್ಟದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಸ್ಪರ್ಧೆ :ಜಿಲ್ಲೆಯಿಂದ 7 ಕ್ರೀಡಾಪಟುಗಳು ಭಾಗಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,10- 15 ಮತ್ತು 16 ರಂದು ಎರೆಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಮಂಗಳೂರಿನ ಉರ್ವ ಸ್ಟೋರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಹೊಸಪೇಟೆಯ ವಿಕ್ಟರಿ ಜಿಮ್ ನ ಏಳು ಜನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಜೂನಿಯರ್ ವಿಭಾಗದಲ್ಲಿ ಗೌಸ್ ಪೀರ್, ದೀಪಕ್ ಕೆ ಎಸ್, ಭರತ್ ಜಿ, ಅಬ್ದುಲ್ಲ ಹಾಗೂ ಸೀನಿಯರ್ ವಿಭಾಗದಲ್ಲಿ ಜೈಶರಣ, ಹುಸೇನ್ ಬಾಷಾ ಮತ್ತು ಹಸೇನ್ ಈ ಏಳು ಜನ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಪದಕ ಗಳಿಸಿ ವಿಜಯನಗರ ಜಿಲ್ಲೆಗೆ ಕೀರ್ತಿ ತರಲಿ ಹಾಗೆ ಇದೇ ರೀತಿ ಅವರ ಸಾಧನೆ ಮುನ್ನಡೆಯಲಿ ಎಂದು ವಿಕ್ಟರಿ ಜಿಮ್ ನ ತರಬೇತುದಾರರಾದ ವಾಲಿಬಾಷಾ, ಬಲಿಷ್ಠ ಮಹಿಳೆ ವಿಜಯವಾಣಿ ಹಾಗೂ ನಗರದ ಕ್ರೀಡಾ ಕ್ರೀಡಾಭಿಮಾನಿಗಳು ಮತ್ತು ಕ್ರೀಡಾ ಪ್ರೋತ್ಸಾಹಕರು ಶುಭಕೋರಿದ್ದಾರೆ.

