
ರೇಣುಕಾ ಸ್ವಾಮಿ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಲಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 21- ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯವರನ್ನು ಅಪಹರಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಶೆಡ್ ಒಂದರಲ್ಲಿ ಕೂಡಿಹಾಕಿ, ರಾತ್ರಿ ಇಡೀ ಚಿತ್ರಹಿಂಸೆ ಕೊಟ್ಟು, ಆತನನ್ನು ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ, ಎಲ್ಲಾ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು, ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಗಂಗಾವತಿ ತಾಲೂಕು ನಾಗರಿಕ ಸಮಾಜದ ವತಿಯಿಂದ ರಾಜ್ಯಪಾಲರಲ್ಲಿ ಮನವಿ ಪತ್ರದ ಮೂಲಕ ಮನವಿ ಸಲ್ಲಿಸಿದರು.
ಬಿಜೆಪಿ ಹಿರಿಯ ಮುಖಂಡ, ಕಾಡ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡುತ್ತ, ರೇಣುಕಾ ಸ್ವಾಮಿ ಪವಿತ್ರ ಗೌಡರಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾರೆ ಎಂಬ ಕಾರಣಕ್ಕಾಗಿ, ದರ್ಶನ ಹಾಗೂ ಆತನ ಗ್ಯಾಂಗ್ ಸೇರಿಕೊಂಡು ಮೋಸದಿಂದ ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೇರಿಗೆ ಕರೆದುಕೊಂಡು ಹೋಗಿ, ಅವನಿಗೆ ಬುದ್ಧಿ ಹೇಳಿ, ಇಲ್ಲ ಅವರೇ ಪೊಲೀಸ್ ಕಂಪ್ಲೇಂಟನ್ನು ಕೊಟ್ಟು ಕಾನೂನು ಪ್ರಕಾರ ಆತನ ಮೇಲೆ ಕ್ರಮ ಜರುಗಿಸಬಹುದಿತ್ತು, ಆದರೆ ಅದನ್ನ ಬಿಟ್ಟು ಈ ನೆಲದ, ಈ ದೇಶದ ಪವಿತ್ರ ಕಾನೂನನ್ನು ಕೈಗೆತ್ತಿಕೊಂಡು ಆತನನ್ನು ಅಮಾನುಷವಾಗಿ ಕೊಲೆ ಮಾಡಿರುವುದು ಅಕ್ಷಮ್ಯ ಅಪರಾಧ. ಜೊತೆಗೆ ಯಾರೂ ಕ್ಷಮಿಸಲಾರರಂತಹ ಕೃತ್ಯವನ್ನು ದರ್ಶನ ಮತ್ತು ಆತನ ಗ್ಯಾಂಗ್ ಮಾಡಿದೆ, ಸಿನಿಮಾ ನಟನಾಗಿ ತೆರೆಯ ಮೇಲೆ ಸಮಾಜಕ್ಕೆ ಒಳ್ಳೆಯ ಮೆಸೇಜ್ ನೀಡುತ್ತಿದ್ದವರು ಅಮಾಯಕ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವುದು ನಿಜಕ್ಕೂ ಇದು ಹೇಯ ಕೃತ್ಯ, ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಅಹಂಕಾರ ದರ್ಶನಿಗೆ ಹೆಚ್ಚಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಮ ನಾಯ್ಕ,ಗೋವಿಂದಪ್ಪ ಮ್ಯಾದರ್,ಸಮಾಜದ ಮುಖಂಡರಾದ ರೇವಣಸಿದ್ದಯ್ಯಸ್ವಾಮಿ ಅರಳಿಹಳ್ಳಿಮಠ,ಸಂಗಯ್ಯಸ್ವಾಮಿ ಸಂಶಿಮಠ,ಎಸ್.ಬಿ.ಹಿರೇಮಠ, ಆದಯ್ಯಸ್ವಾಮಿ ಹಿರೇಮಠ, ಹೆಚ್.ಎಂ,ವಿರೂಪಾಕ್ಷಸ್ವಾಮಿ, ಶಾಂತಮಲ್ಲಯ್ಯಸ್ವಾಮಿ,ಮಲ್ಲಿಕಾರ್ಜುನಸ್ವಾಮಿ,ವೀರಯ್ಯ ಹುಲಿಗುಡ್ಡ,ಗಂಗಾಧರಸ್ವಾಮಿ ಕೋರಿಯರ,ಮಲ್ಲಯ್ಯಸ್ವಾಮಿ,ಅಯ್ಯಪ್ಪ ಸ್ವಾಮಿ,ಅಮರೇಶ ಹಿರೇಮಠ ಮುಂತಾದವರು ಉಪಸ್ಥೀತರಿದ್ದರು.