20gvt4

ಯೋಗ ಜಾಗೃತಿ ಜಾಥಾಕ್ಕೆ ಚಾಲನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 21- ನಗರದಎಪಿಎಂಸಿ ಆವರಣದಿಂದ ಯೋಗ ಜಾಗೃತಿ ಜಾಥಾಕ್ಕೆ ಹಾಸ್ಯಕಲಾವಿದ ಬಿ ಪ್ರಾಣೇಶ,ಮಾಜಿಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಉತ್ತಮ ಆರೋಗ್ಯಕ್ಕೆ ಯೋಗ ಅತ್ಯವಶ್ಯಕವಾಗಿದ್ದು, ದಿನಾಲು ಯೋಗ ಮಾಡುವುದರಿಂದ ನಾವು ರೋಗಮುಕ್ತ ಭಾರತವನ್ನು ನಿರ್ಮಾಣ ಮಾಡಬಹುದು.

ಜೂನ್ 21 ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ದಿನವನ್ನಾಗಿ ಘೋಷಿಸಿದ್ದು ನಮ್ಮದೇಶದ ಹೆಮ್ಮೆ ಎಂದರು.

ಈ ಸಂದರ್ಭದಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ಪತಾಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಡಾ.ಎಸ್.ಬಿ.ಹಂದ್ರಾಳ, ಆರ್ಟ್ ಆಫ್ ಲಿವಿಂಗ ಅಧ್ಯಕ್ಷ ಶಾಂತವೀರ ಸ್ವಾಮಿಗಳು, ಶಾಮಮೂರ್ತಿ ವಕೀಲರು, ಕೆ. ಚೆನ್ನಬಸಯ್ಯಸ್ವಾಮಿ, ರಘುನಾಥ್ ಪವಾರ್, ಡಾ.ಅಮರ್ ಪಾಟೀಲ್, ರೇಖಾ ರಾಯಭಾಗಿ, ಶ್ರವಣ್ ಕುಮಾರ್ ರಾಯ್ಕರ್, ಸದಾನಂದ ಶೇಟ್, ಬಸನಗೌಡ ಪಾಟೀಲ್, ಶರಬಣ್ಣ ಮಾಸ್ಟರ್, ಪ್ರಭು ಶೆಟ್ಟರ್, ಪರಗಿ ನಾಗರಾಜ್, ಪಂಪಾಪತಿ ಕುಂಬಾರ್, ಚಂದ್ರಶೇಖರ್, ಯರಿಸ್ವಾಮಿ ಗೌಡ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!