ರೈತ ಹೋರಾಟಗಾರ ಕಾರ್ತಿಕ್ ನಿಧನ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ,31- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಧ್ಯಕ್ಷ ರೈತ ಹೋರಾಟಗಾರ ಜೆ. ಕಾರ್ತಿಕ್ (40) ವರ್ಷ ನಿಧನರಾಗಿದ್ದಾರೆ.
ಮುನಿರಾಬಾದ್ ಬಳಿ ಬೂದುಗುಂಪ ಕ್ರಾಸ್ ಬಳಿ ಕ್ಯಾಂಟರ್ ಒಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತಕ್ಕೀಡಾಗಿ ಕಾರ್ತಿಕ್ ,ಹುಬ್ಬಳ್ಳಿ ಯ ಆಸ್ಪತ್ರೆ ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಬುಧವಾರ ಬೆಳಗಿನ ಜಾವ ಕೊನೆಯುಸಿರೆಳದಿರುವರು.
ಹೋರಾಟಗಾರನ ದಾರುಣ ಅಂತ್ಯ : ಜೆ.ಕಾರ್ತಿಕ್ ರೈತರ ಹೋರಾಟಗಳ ಸೂತ್ರದಾರಿಯಾಗಿ. ಕಬ್ಬು ಬೆಳೆಗಾರ ಸಂಕಷ್ಟಕ್ಕೆ ಧ್ವನಿಯಾಗಿದ್ದರು, ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರ ಸಂಘಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಮಟ್ಟದ ರೈತ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು, ಅದರಂತೆ ಕೇಂದ್ರ ಸರ್ಕಾರದ ಮಾರಕ ಕೃಷಿ ಕಾಯ್ದೆಗಳ ವಿರುದ್ಧನಿರಂತರ ವ್ಯವಸ್ಥಿತ ಹೋರಾಟಗಳನ್ನು ರೂಪಿಸುವ ಮೂಲಕ ರೈತರಿಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು, ಅಲ್ಲದೇ ಇತ್ತೀಚೆಗೆ ಕೋಡಿಹಳ್ಳಿ ಚಂದ್ರಶೇಖರ್ ಸಂಘಟನೆಯಿಂದ ಅಂತರ ಕಾಯ್ದುಕೊಂಡು ತಾವೇ ಹೊಸ ರೈತ ಸಂಘಟನೆಯನ್ನು ಹುಟ್ಟುಹಾಕಿ ಹೋರಾಟಕ್ಕಿಳಿದಿದ್ದರು. ಕಮಲಾಪುರ ಕೆರೆ, ನಲ್ಲಾಪುರ ಚೆಕ್ ಡ್ಯಾಂ, ತುಂಗಭದ್ರ ಜಲಾಶಯದ ಹೂಳೆತ್ತುವ ಬಗ್ಗೆಯು ನಿಖರವಾದ ವಿಷಯ ಸಿದ್ಧಾಂತದೊಂದಿಗೆ ಹೋರಾಟ ನಡೆಸಿ ಬಹುತೇಕ ಯಶಸ್ವಿಯಾಗಿದ್ದರು.
ಇವರ ಅಕಸ್ಮಿಕ ಸಾವಿನಿಂದ ರೈತ ಸಂಘಟನೆಯು ಹಲವಾರು ಅನುಯಾಯಿಗಳಿಗೆ ತುಂಬಲಾರದ ನಷ್ಟವಾಗಿದ್ದು ಮೂಕ ವಿಸ್ಮಿತರಾಗಿದ್ದಾರೆ.
