
ಲೋಕಸಭಾ ಚುನಾವಣೆ :
ಪೋಲಿಸ್ ಇಲಾಖೆಯಲ್ಲಿ ಸರ್ಜರಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೧- ಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಜಿಲ್ಲೆಯ ಹಲವು ಪೊಲೀಸ್ ಅಧಿಕಾರಿಗಳನ್ನು ವಿವಿಧೆಡೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೊಪ್ಪಳ ಜಿಲ್ಲೆಯ ತಾವರಗೇರಾ ಠಾಣೆಯ ಮಲ್ಲಪ್ಪ ಮುದುಗಲ್, ಅಳವಂಡಿಯ ನಾಗಪ್ಪ ಹರಿಜನ ಕವಿತಾಳ, ಕೊಪ್ಪಳ ಗ್ರಾಮೀಣ ಠಾಣೆಯ ಅಶೋಕ ಬೇವೂರ ಹೊಸಪೇಟೆ ನಗರ ಠಾಣೆಗೆ, ಯಲಬುರ್ಗಾ ಠಾಣೆಯ ಗುಲಾಮ ಅಹ್ಮದ್ ಮಾನ್ವಿ, ಗಂಗಾವತಿ ಸಂಚಾರ ಠಾಣೆಯಲ್ಲಿದ್ದ ಶಾರವ್ವ ಹಂಪಿ ಸಂಚಾರ ಠಾಣೆಗೆ, ತಾವರಗೇರಾ ಠಾಣೆಯ ನಾಗರಾಜ ಕೊಟಗಿ ತುರವಿಹಾಳ್‌ಗೆ, ಕೊಪ್ಪಳ ನಗರ ಠಾಣೆಯ ಶರಣಪ್ಪ ಹೊಸಪೇಟೆ ಪಟ್ಟಣ ಠಾಣೆಗೆ ಮತ್ತು ಕೊಪ್ಪಳ ಸಂಚಾರ ಠಾಣೆಯಲ್ಲಿದ್ದ ಫಕಿರಮ್ಮ ಹಂಪಿ ಪ್ರವಾಸ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದಾರೆ.
ಮೂರು ವರ್ಷ ಜಿಲ್ಲೆಯ ಒಂದೇ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವ ಪಿಎಸ್‌ಐ ಹಾಗೂ ಮಹಿಳಾ ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಕೊಪ್ಪಳ ನಗರ ಠಾಣೆಯಲ್ಲಿದ್ದ ಉಮೇರಾ ಬಾನು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ, ಗಂಗಾವತಿ ಗ್ರಾಮೀಣ ಠಾಣೆಯಲ್ಲಿದ್ದ ಪುಂಡಪ್ಪ ಸಿಂಧನೂರು ಸಂಚಾರ ಠಾಣೆಗೆ ಮತ್ತು ಕೊಪ್ಪಳ ಸಂಚಾರ ಠಾಣೆಯ ಶ್ರೀಶೈಲರಾವ್ ಕುಲಕರ್ಣಿ ಹನುಮಸಾಗರ ಠಾಣೆಗೆ ವರ್ಗಾಯಿಸಲಾಗಿದೆ. ಹನುಮಸಾಗರ ಠಾಣೆಯ ಟಿ.ಎಲ್. ಬಸಪ್ಪ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ, ಕೊಪ್ಪಳ ಮಹಿಳಾ ಠಾಣೆಯಲ್ಲಿದ್ದ ಮಣಿಕಂಠ ಕೆ.ಎಚ್. ರಾಯಚೂರಿನ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಕೊಪ್ಪಳದ ಡಿಎಆರ್ ಘಟಕದಲ್ಲಿ ಕೆಲಸ ಮಾಡುತ್ತಿರುವ ಪರಶುರಾಮ ಗೊರೇಬಾಳ ಮತ್ತು ಶಶಿಧರ ಗುಡದೂರ, ಬಾಹುಬಲಿ ಆರ್. ಅಕ್ಕೊಳ್ಳಿ ಮೂವರನ್ನು ಬಳ್ಳಾರಿಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೆಲ ತಿಂಗಳಲ್ಲೇ ನಿವೃತ್ತಿ ಹೊಂದುವ ಕುಕನೂರು ಠಾಣೆಯ ವಿರುಪಯ್ಯ ಮಠದ ಕೊಪ್ಪಳ ಸಂಚಾರ ಠಾಣೆಗೆ ಮತ್ತು ಬೇವೂರ ಠಾಣೆಯಲ್ಲಿರುವ ಮಾರ್ತಾಂಡಪ್ಪ ಕೊಪ್ಪಳ ಡಿಎಸ್‌ಬಿ ಘಟಕಕ್ಕೆ ವರ್ಗಾವಣೆಯಾಗಿದ್ದಾರೇಂದು ತಿಳಿದು ಬಂದಿದೆ.