
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸುದ್ದಿಗೋಷ್ಠಿ ಯಲ್ಲಿ ಸಹಾಯಕ ಚುನಾವಣಾಧಿಕಾರಿ ಟಿ.ಎಸ್.ರುದ್ರೇಶಪ್ಪ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,20- ಪಟ್ಟಣದ ತಹಶೀಲ್ದಾರ್ ಕಛೇರಿ ಕಂದಾಯ ಸಭಾಭವನದಲ್ಲಿ ಸಹಾಯಕ ಚುವಣಾಧಿಕಾರಿಗಳ ಕಛೇರಿಯನ್ನು ತೆರೆಯಲಾಗಿದ್ದು, ಚುನಾವಣಾ ಮಾಹಿತಿಯನ್ನು ನಿಗದಿತ ಅವದಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳವರ ಕಛೇರಿಯಿಂದ ಪಡೆಯಬಹುದಾಗಿರುತ್ತದೆ. ಎಂದು ಸಹಾಯಕ ಚುನಾವಣಾಧಿಕಾರಿ ಟಿ,ಎಸ್, ರುದ್ರೇಶಪ್ಪ ಹೇಳಿದರು
ಅದಿಸೂಚನೆ ಹೊರಡಿಸುವ ದಿನಾಂಕ 12-4-2024 ಶುಕ್ರವಾರ,ನಾಮ ಪತ್ರ ಸಲ್ಲಿಸುವ ಕೊನೆಯ ದಿನಾಂಕ,19-4-2024, ನಾಮ ಪತ್ರ ಪರಿಶೀಲನೆ 20-4-2024 ,ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ 22-4-2024, ಮತದಾನ ದಿನಾಂಕ ಮತ್ತು ಸಮಯ 7-5-2024, ಮತ ಏಣಿಕೆ ದಿನಾಂಕ,4-5-2024, ಚುನಾವಣಾ ಪ್ರಕ್ರೀಯೆ ಮುಕ್ತಾಯ ಗೊಳಿಸ ಬೇಕಾದ ದಿನಾಂಕ 6-6-2024 ರಂದು ಮುಕ್ತಾಯ ಗೊಳ್ಳಲಿದೆ ಎಂದು ಪಟ್ಟಣದ ಕಂದಾಯ ಸಭಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್ ಬೀರದಾರ ರವರನ್ನ ನೇಮಿಸಲಾಗಿದೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಬನ್ನಿಕೊಪ್ಪ,ಬಂಡಿಕ್ರಾಸ್ ಸಂಕನೂರಕ್ರಾಸ್ ನಲ್ಲಿ ಚೆಕ್ಕ ಪೋಷ್ಟಗಳನ್ನ ತೆರೆಯಲಾಗಿದೆ.
ವಿಧಾನಸಭಾಕ್ಷೇತ್ರವಾರು ಕೆಳಕಾಣಿಸಿದಂತೆ ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ವೆಚ್ಚ ವೀಕ್ಷಣೆ ತಂಡಗಳನ್ನು ನೇಮಿಸಲಾಗಿದೆ.16-03-2024 ರಿಂದ ಜಾರಿಯಾಗಿದ್ದು, ನೀತೀ ಸಂಹಿತೆ ಜಾರಿಯಾಗಿದ್ದದು ಚುನಾವಣಾ ಪ್ರಚಾರಗಳ ಸಭೆ / ಸಮಾರಂಭ / ರ್ಯಾಲಿ ಮುಂತಾದವುಗಳನ್ನು ನಡೆಸಲು 48 ಗಂಟೆಗಳ ಮುಂಚಿತವಾಗಿ ಆನ್ಲೈನ್ ಮೂಲಕ ಸುವಿಧಾ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ಸಹಾಯಕ ಚುನಾವಣಾಧಿಕಾರಿಗಳವರ ಕಛೇರಿಯಿಂದ ಅನುಮತಿ ಪಡೆಯಬೇಕಾಗಿರುತ್ತದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ಲೇಕ್ಸ್ ಬ್ಯಾನರ್ / ಬಂಟಿಂಗ್ಸ್ ಅಳವಡಿಸಲು ಸಂಬಂಧಪಟ್ಟ ಸ್ಥಳಿಯ ಸಂಸ್ಥೆಗಳಿಗೆ ನಿಗದಿತ ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕಾಗಿರುತ್ತದೆ.
ಮೈಕ್ / ಸ್ಪೀಕರ್ / ಡಿ.ಜೆ ಉಪಯೋಗಿಸಲು ಪೋಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ.
ಸರ್ಕಾರಿ ಜಾಗೆಯಾಗಿದ್ದಲ್ಲಿ ಸಂಬಂಧಪಟ್ಟ ಇಲಾಖೆಯಿಂದ, ಅಥವಾ ಖಾಸಗಿ ಸ್ಥಳವಾಗಿದ್ದಲ್ಲಿ ಸಂಬಂಧಿಸಿದ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆಯ ಬೇಕಾಗುತ್ತದೆ. ಕರಪತ್ರಗಳನ್ನು ಮುದ್ರಿಸುವ ಸಮಯದಲ್ಲಿ ಮುದ್ರಿಸಿದ ಪ್ರತಿಗಳ ಒಟ್ಟು ಸಂಖ್ಯೆ, ಮುದ್ರಕರ ವಿವರಗಳನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
ಚುನಾವಣಾ ಪ್ರಚಾರಕ್ಕಾಗಿ ಧಾರ್ಮಿಕ ಸಂಸ್ಥೆಗಳನ್ನು ಉಪಯೋಗಿಸುವಂತಿಲ್ಲ.ಜಾತಿ / ಧರ್ಮ ಆಧಾರದ ಮೇಲೆ ಪ್ರಚಾರ ಮಾಡುವಂತಿಲ್ಲ ಹಾಗೂ ಇದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವಂತಿಲ್ಲ.ಮತದಾರರಿಗೆ ಯಾವುದೇ ಆಮೀಶ ನೀಡುವಂತಿಲ್ಲ.ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ.
ಮತದಾನದ ಮುಕ್ತಾಯದ ಸಮಯಕ್ಕೆ 48 ಗಂಟೆ ಮೊದಲು ಬಹಿರಂಗ ಪ್ರಚಾರವನ್ನು ಮಾಡುವಂತಿಲ್ಲ, ಹಾಗೂ ಮತದಾರರಲ್ಲದವರು ಕ್ಷೇತ್ರವನ್ನು ತೊರೆಯಬೇಕಾಗುತ್ತದೆ.
ಸರ್ಕಾರಿ ನೌಕರರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಚುನಾವಣಾ ಅಕ್ರಮ ನಡೆದಲ್ಲಿ ಫ್ಲಾಯಿಂಗ್ ಸ್ಕ್ಯಾಡ್, ಎಂ.ಸಿ.ಸಿ ನೋಡಲ್ ಅಧಿಕಾರಿಗಳಿಗೆ, ಸೆಕ್ಟರ್ ಅಧಿಕಾರಿಗಳಿಗೆ ತಿಳಿಸಬಹುದಾಗಿರುತ್ತದೆ. ಮತಗಟ್ಟೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವುದನ್ನು ನಿಷೇಧಿಸಲಾಗಿದೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಮತ್ತು ಮತದಾರರ ವಿವರಗಳು : 22-01-2024 ರ ಅಂತ್ಯಕ್ಕೆ
ಒಟ್ಟು 256 ಮತಗಟ್ಟೆಗಳಲ್ಲಿ ಪುರುಷ ಮತದಾರರು 113815 ಮಹಿಳಾ ಮತದಾರರು114063 ಇತರೆ 5 ಒಟ್ಟು 227883 ಮತದಾರರಿದ್ದಾರೆ. ಇದರಲ್ಲಿ ಯುವ ಮತದಾರರು 4915, ವಿಕಲ ಚೇತನರು 3249 ಹೋಗೂ 85 ವರ್ಷದ ವಯೋಮಾನದವರು 1564 ಮತದಾರರಿದ್ದಾರೆ.
ಭಾರತ ಚುನಾವಣಾ ಆಯೋಗವು ವಿಕಲಚೇತನ ಮತದಾರರು,ಕೋವಿಡ್-19 ಸೋಂಕು. ಪೀಡಿತರು 85+ ವಯಸ್ಸಿನ ಮತದಾರರಿಗೆ ಅಂಚೆ ಮತಪತ್ರದ ವ್ಯವಸ್ಥೆಯನ್ನು ಕಲ್ಪಿಸಿರುತ್ತದೆ. ಬೂತ್ ಮಟ್ಟದ ಅಧಿಕಾರಿಗಳಿಂದ ಮನೆ ಮನೆಗೆ ತೆರಳಿ ನಮೂನೆ 12-ಡಿ ಫಾರ್ಮ, ಸದರಿ ಮತದಾರರಿಗೆ ವಿತರಿಸಲಾಗುವುದು. ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಇಚ್ಛಿಸುವವರು ನಮೂನೆ- 12 ಡಿ ಫಾರ್ಮ ಭರ್ತಿ ಮಾಡಿ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು, ನಮೂನೆ-12 ಡಿ ಫಾರ್ಮನಲ್ಲಿ ಸಲ್ಲಿಸಿದ ಮತದಾರರಿಂದ ಮನೆ ಮನೆಗೆ ತೆರಳಿ ಮತಪೆಟ್ಟಿಗೆಯಲ್ಲಿ ಮತಪತ್ರಗಳನ್ನು ಪಡೆಯಲಾಗುವುದು
ಚುನಾವಣಾ ಸಂಬಂಧಿತ ದೂರುಗಳ ನಿರ್ವಹಣೆ: ಸಲ್ಲಿಸಲು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿತ ಎಲ್ಲಾ ರೀತಿಯ ದೂರುಗಳನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ 1950 ಟೋಲ್ ಫ್ರೀ ಸಂಖ್ಯೆಯೊಂದಿಗೆ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ.
ಸಾರ್ವಜನಿಕರು ಸದರಿದೂರವಾಣಿ ಸಂಖ್ಯೆಗೆ 24×7 ದೂರುಗಳನ್ನು ಸಲ್ಲಿಸಬಹುದಾಗಿದೆ. ಅದಲ್ಲದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ವಿಧಾನಸಭಾ ಕ್ಷೇತ್ರಗಳಲ್ಲಿ ಸಹಾಯಕ ಚುನಾವಣಾಧಿಕಾರಿಗಳಿಗೆ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಇವರಿಗೆ ದೂರುಗಳನ್ನು ಸಲ್ಲಿಸಬಹುದಾಗಿದೆ. ಭಾರತ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾವಹಿಸಲು C-VIGIL ಮೊಬೈಲ್ ಆಪ್ನ್ನು ಪರಿಚಯಿಸಿದ್ದು, ಮತದಾರರ ಮೊಬೈಲ್ನಲ್ಲಿ ಆಪ್ನ್ನು ಡೌನ್ಫೋಡ್ ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಈ ಮೂಲಕ ದೂರುಗಳನ್ನು ದಾಖಲಿಸಬಹುದಾಗಿದೆ.
ಮತದಾರರಿಗೆ ವೋಟರ್ ಸ್ಲಿಪ್ಸ್ ಮತ್ತು ವೋಟರ್ಗೈಡ್ : ಚುನಾವಣೆ ನಿಮಿತ್ಯ ಮತದಾನದ ಸಲುವಾಗಿ ಎಲ್ಲಾ ಮತದಾರರಿಗೆ ವೋಟರ್ ಸ್ಲಿಪ್ಸಗಳನ್ನು ಮತ್ತು ಪ್ರತಿ ಮನೆ ಮನೆಗಳಿಗೆ ವೋಟರ್ ಗೈಡ್ಗಳನ್ನು ವಿತರಿಸಲಾಗುವುದು.
ಭಾರತ ಚುನಾವಣಾ ಆಯೋಗದ ನಿರ್ದೇಶದಂತೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ದಿನದಂದು ಮಹಿಳಾ ಸಿಬ್ಬಂದಿಗಳನ್ನು ಮಾತ್ರ ಒಳಗೊಂಡ ವಿಶೇಷ ಸಖಿ ಮತಗಟ್ಟೆಯನ್ನು, ಮತ್ತು ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯಲಬುರ್ಗಾ ತಹಶೀಲ್ದಾರ್ ಬಸವರಾಜ ತೆನ್ನಳ್ಳಿ,ಕುಕನೂರು ತಹಶೀಲ್ದಾರ್ ಅಶೋಕ ಶಿಗ್ಗಾಂವಿ,ವಿಜಯ ಕುಮಾರ ಗುಂಡೂರು, ಶಮೀರ್ ಸೇರಿದಂತೆ ಮತ್ತು ಇತರರು ಭಾಗವಹಿಸಿದರು