WhatsApp Image 2024-03-20 at 4.39.35 PM

ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವದಿಸಿ : ಬಿಜೆಪಿ ಮುಖಂಡ ಶ್ರೀರಾಮುಲು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,20- ಕಳೆದ 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸತತವಾಗಿ ನನ್ನ ಆಶೀರ್ವದಿಸುತ್ತಿರುವ ಜನತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮಾತನಾಡಿ ತನ್ನ ಗೆಲುವಿಗೆ ಸಹಕರಿಸಬೇಕೆಂದು ಮಾಜಿ ಸಚಿವ ಬಿಜೆಪಿ ಮುಖಂಡ ಬಿ ಶ್ರೀರಾಮುಲು ಹೇಳಿದರು.

ನಗರದ ತಾಳೂರು ರಸ್ತೆಯಲ್ಲಿರುವ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಳ್ಳಾರಿ ಗ್ರಾಮಾಂತರ ಮತ್ತು ಕೌಲ್ ಬಜಾರ್ ಮಂಡಲಗಳ ಬೂತ್ ವಿಜಯ ಅಭಿಯಾನದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಜನತೆ ಕೊಟ್ಟ ಆಶೀರ್ವಾದದಿಂದ ತಾನು ಎಷ್ಟೋ ಬೆಳೆದಿರುವುದಾಗಿ, ಜನರ ಋಣ ಎಷ್ಟು ಮಾಡಿದರೂ ಬಗೆಹರಿಯುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾನು ಸೋಲು ಉಂಡರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನತೆ ತನ್ನ ವಿಜಯಕ್ಕೆ ಕೈಜೋಡಿಸಬೇಕೆಂದು ಕೇಳಿಕೊಂಡರು.

ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಭಾರತ ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಮತ್ತು ಐದು ವರ್ಷಗಳ ಕಾಲ ಸರ್ಕಾರ ನಡೆಯಬೇಕೆಂದರೆ ಜನತೆ ಆಶೀರ್ವಾದ ಎಷ್ಟು ಅವಶ್ಯಕತೆ ಇದೆ ಎಂದರು.

ಎಲ್ಲಿ ಕಳೆದುಕೊಳ್ಳುತ್ತಿವೆ ಅಲ್ಲೇ ಹುಡುಕುವ ಅಭ್ಯಾಸ ಒಳ್ಳೆದೆಂದು ಹಾಗಾಗಿ ತಾನು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಪ್ರಚಾರ ಪ್ರಾರಂಭಿಸುತ್ತಿರುವದಾಗಿ ತಿಳಿಸಿದರು.

ಬೂತ್ ಮಟ್ಟದ ಕಾರ್ಯಕರ್ತರು ಮತ್ತು ನಾಯಕರು ಮನೆ ಮನೆಗೆ ಹೋಗಿ ಜನರಿಗೆ ಮೋದಿಜೀ ಅವರ ಜನಪರ ಕಾರ್ಯಕ್ರಮಗಳನ್ನು ತಿಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕರು ಮತ್ತು ಬಳ್ಳಾರಿ ಚುನಾವಣೆ ಉಸ್ತುವಾರಿ ರವಿಕುಮಾರ್, ವಿಧಾನ ಪರಿಷತ್ ಸದಸ್ಯರು ವೈ ಎಂ ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು,ಬಿಜೆಪಿ ಮುಖಂಡರಾದ ಕೆ ರಾಮಲಿಂಗಪ್ಪ, ಗುರುಲಿಂಗನಗೌಡ, ಓಬಳೇಶ್, ಮುರಾರಿ ಗೌಡ, ಗುತ್ತಿಗನೂರು ವಿರೂಪಾಕ್ಷಗೌಡ ಮುರಹರಿ ಗೌಡ ಹನುಮಂತಪ್ಪ ಸೋಮನಗೌಡ ಡಾಕ್ಟರ್ ಅರುಣ ನೂರ್ ಭಾಷಾ, ಕೌಲ್ ಬಜಾರ್ ಮಂಡಲ ಅಧ್ಯಕ್ಷ ನಾಗರಾಜ ರೆಡ್ಡಿ, ಪಾಲಿಕೆ ಸದಸ್ಯ ಎಂ ಗೋವಿಂದರಾಜಲು, ರೇಡಿಯೋ ಪಾರ್ಕ್ ಏ ಎಂ ಸಂಜಯ್ ಸೇರಿದಂತೆ ಇನ್ನಿತರೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!