
ವಿದ್ಯಾವಂತರಾಗಲು ಶ್ರಮಿಸಿ
ಸಾಧ್ಯ ಫೌಂಡೇಶನ್, ಮ್ಯಾನೇಜಿಂಗ್ ಟ್ರಸ್ಟಿ ಆರತಿ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ( ವಿಜಯನಗರ )- ಪ್ರತಿ ವಿದ್ಯಾರ್ಥಿಯು ಪ್ರತಿಭಾವಂತರಾಗಬೇಕೆಂದರೆ, ಮೊದಲು ವಿದ್ಯಾವಂತರಾಗಲು ಶ್ರಮಿಸಬೇಕೆಂದು, ಹೊಸಪೇಟೆಯ, ಸಾಧ್ಯ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ, ಸಮಾಜ ಸೇವಕರು, ಕೆ ಟಿ ಆರತಿ ಹೇಳಿದರು.
ಬುಧವಾರ ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿ, ಬಿಬಿಎಂ ಬಿಸಿಯೇ ವಿಭಾಗದಿಂದ ಅಡಿಟೋರಿಯಂ ಹಾಲ್ನಲ್ಲಿ ನಡೆಸಿದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಒಂದು ದೇಶ ಎಲ್ಲಾ ರಂಗದಲ್ಲಿ ಅಭಿವೃದ್ಧಿ ಹೊಂದಬೇಕೆಂದರೆ, ವಿದ್ಯಾವಂತರ ಸೇವೆಗಳು ಅತ್ಯಗತ್ಯ ಎಂದರು.
ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಕಾಲವನ್ನು ವ್ಯರ್ಥ ಮಾಡದೆ ಉತ್ತಮವಾಗಿ ಅಭ್ಯಾಸ ಮಾಡಲು ಶ್ರಮಿಸಬೇಕೆಂದರು. ದೇಶವನ್ನು ಅಭಿವೃದ್ಧಿ ಪಡಿಸಿ ಮುಂದು ನಡೆಸಲು ಯುವತಿ ಶ್ರಮಿಸಬೇಕೆಂದರು. ಜ್ಞಾನದಿಂದ ಮಾತ್ರ ಅಭಿವೃದ್ಧಿ ಕಟ್ಟಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅನಂತರ ಕಾರ್ಯಕ್ರಮದಲ್ಲಿ, ಮತ್ತೋರ್ವ ಅತಿಥಿ, ಬಳ್ಳಾರಿಯ ನಾಗರಿಕ ಪತ್ರಿಕಾಯ ಹಿರಿಯ ವರದಿಗಾರರು, ಕೆ ಹನುಮೇಶ್ ರಾವ್ ಮಾತನಾಡುತ್ತಾ,, ಸಹಜವಾಗಿ ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ, ಶ್ರಮಪಟ್ಟವರು ವಿಜಯ ಸಾಧಿಸಿದರೆ, ಕಾಲ ವ್ಯರ್ಥ ಮಾಡುವರು ಅಪ ಜಯ ಪಡೆಯುತ್ತಾರೆ . ವಿಜ್ಞಾನದಿಂದ ಮಾತ್ರ ವಿಜಯ ಸಾಧ್ಯ ಎಂದರು. ವಿಜಯನಗರ ಮಹಾವಿದ್ಯಾಲಯದ,
ಅಧ್ಯಕ್ಷರು ಅಸುಂಡಿ ನಾಗರಾಜ್ ಗೌಡ ನಂತರ ಮಾತನಾಡುತ್ತಾ, ಪ್ರತಿಯೊಬ್ಬರೂ ಜೀವಿತದಲ್ಲಿ ಗುರಿಯನ್ನು ಇಟ್ಟುಕೊಂಡು ಮುನ್ನುಗ್ಗಿದರೆ ವಿಜಯ ಅವರ ಹಿಂದೆ ಇರುತ್ತದೆ ಎಂದರು. ಶ್ರಮ ಇಲ್ಲದೆ ಏನು ಸಾಧ್ಯ ಮಾಡಲು ಆಗದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ವಿಜಯನಗರ ಮಹಾವಿದ್ಯಾಲಯದ ಪ್ರಾಚಾರ್ಯರು ಪ್ರೊಫೆಸರ್ ಸುಭಾಷ್, ಸಿಕಂದರ್ ಭಾಷಾ, ಇತರ ವಿಭಾಗಗಳ ಉಪನ್ಯಾಸಕರು, ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಿಂದ ನಡೆದವು.