ಎಂಎಸ್ಐಎಲ್ ಮಧ್ಯ ಮಾರಾಟ ಅಂಗಡಿಯನ್ನು ರದ್ದುಪಡಿಸಲು ಅಗ್ರಹ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ )ಜ.11: ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮಾಲವಿ ಗ್ರಾಮದಲ್ಲಿ ಹೊಸದಾಗಿ ಮಧ್ಯದ ಎಂ ಎಸ್ ಐ ಎಲ್ ಮಾರಾಟ ಅಂಗಡಿಯ ತೆರೆಯಲು ಮುಂದಾಗಿದ್ದು ಇದನ್ನು ರದ್ದುಪಡಿಸಬೇಕು ಗ್ರಾಮದ ಸಾರ್ವಜನಿಕರು ಮನವಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.
ಈ ಹಿಂದೆ ಸುಮಾರು ತಿಂಗಳುಗಳಿಂದ ನಾವು ನಾಲ್ಕು ಬಾರಿ ಹೋರಾಟ ಮಾಡಿ ಮಧ್ಯದ ಅಂಗಡಿ ತೆರೆಯಲು ಬಂದಾಗ ನಾವು ಮುಚ್ಚಿಸಿದ್ದೇವೆ. ನಮ್ಮ ಊರಿನಲ್ಲಿ ಮಧ್ಯದ ಮಾರಾಟ ಅಂಗಡಿ ಪಕ್ಕದಲ್ಲಿ ತೋಟಗಾರಿಕೆ ತರಬೇತಿ ಕೇಂದ್ರ, ಮೀನುಗಾರಿಕೆ, ಅರಣ್ಯ ಹಾಗೂ ಜಲಾಶಯ ಇರುವುದರಿಂದ ಮತ್ತು ಈ ಮಧ್ಯದ ಮಾರಾಟ ಅಂಗಡಿಯಿಂದ ನಾವು ನಮ್ಮ ಕುಟುಂಬ ಬೀದಿ ಪಾಲು ಆಗಬೇಕಾಗುತ್ತದೆ. ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಕುಡಿದು ತಮ್ಮ ವಿದ್ಯಾಭ್ಯಾಸದ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಲು ದಾರಿಯಾಗುತ್ತದೆ. ಕಳ್ಳತನ ದರೋಡೆ ಇನ್ನು ಮುಂತಾದ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಕೂಲಿಯಿಂದ ಜೀವನ ಮಾಡುತ್ತಿರುವ ನಾವು ಬೀದಿಪಾಲಾಗಬೇಕಾಗುತ್ತದೆ. ಈ ವಿಚಾರವಾಗಿ ಸುಮಾರು ವರ್ಷಗಳಿಂದ ಹೋರಾಟ ಮಾಡಿ ಮಧ್ಯದ ಮಾರಾಟ ಅಂಗಡಿಯನ್ನು ತೆರೆಯಲು ಬಂದಾಗ ಮುಚ್ಚಿಸಿದ್ದೇವೆ. ಜಿಲ್ಲಾಧಿಕಾರಿಯವರು ನಮ್ಮ ಗ್ರಾಮದಲ್ಲಿ ಮದ್ಯ ಮಾರಾಟ ಅಂಗಡಿಯನ್ನು ತೆರೆಯಲು ಅವಕಾಶ ನೀಡಬಾರದು. ಒಂದು ವೇಳೆ ಮಧ್ಯದ ಮಾರಾಟ ಅಂಗಡಿ ತೆರೆಯಲು ಯಾರೆ ಮುಂದಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ ಮಹಿಳಾ ಒಕ್ಕೂಟ ಕಾರ್ಯ ಕರ್ತರು ತ್ರಿವೇಣಿ ನೀಲಮ್ಮ, ಗ್ರಾಕುಸ್, ಕೊಟ್ರಮ್ಮ್, ಶೈನಾಜ್,ಸುಧಾ, ಸುಮ, ಯಾಲ್ಯಾ ಚಂಬಸಪ್ಪ ಚಿಲುಗೋದು ಸುರೇಶ್ ಮಂಜುನಾಥ್,ಈಶಪ್ಪ,ರೆಡ್ಡಿ ಸುರೇಸಾ, ಬಾಂಡ್ರಿ ಕೊಟ್ರಪ್ಪ ,ಕೋಟಾಗಿ ನಾಗರಾಜ್,ಗಾನಿಗಾರ ನಾಗರಾಜ್, ತಳವಾರ ನಾಗಮ್ಮ, ಮನೆಗಾರ್, ನಾಗಮ್ಮ, ಬಸಮ್ಮ, ಶಿಲ್ಪಾ ಯಾಲ್ಯಾ ಸಣ್ಣಕ್ಕ ಮನಗಾರ್ ಸಾಕವ್ವಾ,ಮಂಜುಳ್,ನೀಲಮ್ಮ ಶಾಮಲಾ , ಹುಲಿಗೆಮ್ಮ, ನಾಗಮ್ಮ, ಸಾಕಾಮ್ಮ್, ಪಾರ್ವತಿ,ನೀತ್ರಾವತಿ ,ಅಂಜಿನಮ್ಮ, ರೇಣುಕಮ್ಮ, ಪ್ರಕಾಶ್,ರುದ್ರಮ್ಮ ,ನೀಲಮ್ಮ,ಮಾಲಾವಿ ಗ್ರಾಮ ಪಂಚಾಂಯಿತಿ ಅಧ್ಯಕ್ಷರು ದುರುಗಪ್ಪ ಕೊಂಬಲಿ, ಹುಳುಗಪ್ಪ,ಗೊರಪ್ಪ,ಬುಡೆನ್ಸಾಬ್,ಅಂಜಿನಪ್ಪ ಇದ್ದರು.
