
ವಿಶ್ವ ತಂಬಾಕು ವಿರೋಧಿ ದಿನಾಚರಣೆ : ಜಾಗೃತಿ ಜಾಥಾ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 31- ಕರ್ನಾಟಕ ಸರ್ಕಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬಳ್ಳಾರಿ ಸರ್ವೇಕ್ಷಣ ಘಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿರುಗುಪ್ಪ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿರುಗುಪ್ಪ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಇವರ ಸಹಭಾಗಿತ್ವದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಜಾಗೃತಿ ಜಾಥಾಗೆ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಹಸಿರು ಧ್ವಜ ದೊಂದಿಗೆ ಚಾಲನೆ ನೀಡಿದರು.
ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳಾದ ಡಾ ಬಸವಪುರ ಈರಣ್ಣ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸದಸ್ಯರು ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ಪ್ಯಾನಲ್ ವಕೀಲರಾದ ಎನ್ ಅಬ್ದುಲ್ ಸಾಬ್ ವಕೀಲರ ಸಂಘದ ಅಧ್ಯಕ್ಷರಾದ ಎಸ್ ಮಂಜುನಾಥಗೌಡ ಕಾರ್ಯದರ್ಶಿ ಹೆಚ್ ಪ್ಯಾಟೆಗೌಡ ಮಲ್ಲಿಗೌಡ ಎಚ್ ಕೆ ರಾಮಪ್ಪ ಕೆ ಸಣ್ಣ ಹುಸೇನ್ ಮಲ್ಲೇಶಪ್ಪ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಆರೋಗ್ಯ ಇಲಾಖೆಯ ಚಂದ್ರಶೇಖರ ಹಿರಿಯ ಆರೋಗ್ಯ ಅಧಿಕಾರಿ ಡಾ ನಿಂಗಪ್ಪ ತಾಲೂಕು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಸಿಬ್ಬಂದಿ ವರ್ಗದವರು ಜಾಗೃತಿ ಜಾಥಾದಲ್ಲಿ ಮುಖ್ಯ ರಸ್ತೆಗಳಿಂದ ವಿಶ್ವ ತಂಬಾಕು ರಹಿತ ದಿನದ ತಂಬಾಕು ತ್ಯಜಿಸಿ ಆರೋಗ್ಯ ವೃದ್ಧಿಸಿ ಧೂಮಪಾನ ಧೂಮ ರಹಿತ ನಿಮ್ಮ ದಿನಗಳನ್ನು ಪ್ರಕಾಶಮಾನಗೊಳಿಸಿ ಎಂದು ನುಡಿಮುತ್ತುಗಳ ಆಂದೋಲನ ಜಾಗೃತಿ ನಡೆಸಿದರು.