ಬಿಜೆಪಿ ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದೆ : ಎನ್.ರವಿಕುಮಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 31- ಮುನ್ಸಿಪಲ್ ಪದವಿ ಪೂರ್ವ ಕಾಲೇಜು, ಸರಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದಲ್ಲಿ ಈಶಾನ್ಯ ಪದವಿದರ ಕ್ಷೇತ್ರ ಚುನಾವಣೆಯ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರ ಪರವಾಗಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎನ್ ರವಿಕುಮಾರ ಬಿಜೆಪಿ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನ ನೀಡಿದೆ ಶಾಲಾ ಶಿಕ್ಷಕರ ನೇಮಕಾತಿ ,ಪಿಯು ಉಪನ್ಯಾಸಕರ ನೇಮಕಾತಿ,ವಿಶ್ವವಿದ್ಯಾಲಯಗಳ ಸ್ಥಾಪನೆ, ವಿವಿಗಳಿಗೆ ನೀಡುವ ಅನುದಾನಗಳಲ್ಲಿ ಹೆಚ್ಚಳ ಸೇರಿದಂತೆ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆಯಾಗಿದ್ದ ವೇತನ ಹೆಚ್ಚಳ ಮತ್ತಿತರ ಸಮಸ್ಯೆಗಳನ್ನು ಬಿಜೆಪಿ ಸರಕಾರ ಪರಿಹರಿಸಿದ್ದು ಪ್ರಜ್ಞಾವಂತ ಮತದಾರರಾದ ತಮಗೆಲ್ಲಾ ತಿಳಿದಿದೆ.
ಬಿಜೆಪಿ ಅಭ್ಯರ್ಥಿ ಈ ಹಿಂದೆ ಎಂ ಎಲ್ ಸಿ ಆಗಿದ್ದಾಗಿನಿಂದ ಇಂದಿನವರೆಗೆ ಪದವಿದರರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ, ಈ ಹಿನ್ನೆಲೆಯಲ್ಲಿ ಬರುವ ಜೂನ್ ೩ ರಂದು ನಡೆಯುವ ಚುನಾವಣೆಯಲ್ಲಿ ಅಮರನಾಥ ಪಾಟಿಲ್ ಕ್ರಮ ಸಂಖ್ಯೆ ೧ ಕ್ಕೆ ತಮ್ಮ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಬಿಜೆಪಿ ಯನ್ನು ಗೆಲ್ಲಿಸಿ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ದಿಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು .
ಈ ಸಂದರ್ಭದಲ್ಲಿ ನಗರದ ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ , ಮುಖಂಡರಾದ ಗುರುಲಿಂಗನಗೌಡ,ರಾಮಲಿಂಗಪ್ಪ,ವೀರ ಶೇಖರ ರೆಡ್ಡಿ, ಶ್ರೀನಿವಾಸ ಮೋತ್ಕರ್, ಮತ್ತಿತರರು ಹಾಜರಿದ್ದರು.
