ಬಯಲು ಸೀಮೆಯ ಹಸಿರಾಗಿಸಿದ
ಉಸಿರನು ನೀಡಿ ನುಡಿದಂತೆ ನಡೆದ
ಮಹಾ ಶರಣರು ಶ್ರೀ ಸಿದ್ದೇಶ್ವರರು!(ಪ)
ಜ್ಞಾನ ಯೋಗಾಶ್ರಮದಿ ನಿತ್ಯ ಪ್ರವಚನವ ಮಾಡಿ
ಶುಭ್ರವಾದ ವಸ್ತ್ರವ ಧರಿಸಿದ
ಸತ್ಯ ಶಾಂತಿಯ ಅವದೂತರು!
ಎಲ್ಲರ ಮನವನು ಶುದ್ಧಿ ಗೊಳಿಸಿದವರು !
ಸರಳ ಸಜ್ಜನಿಕೆಯ ಮಾನವತವಾದಿಗಳು ಶ್ರೀ ಸಿದ್ದೇಶ್ವರರು! (೧)
ಯಾವ ಕುರುವು ವಿಲ್ಲದೆಯ
ಜೀವನ ನಶ್ವರವೆಂದು ತಿಳಿದು ಚಿರಕಾಲ ಚಿರಂಜೀವಿಯಾದರು!
ಶತಮಾನದ ಮಹಾಸಂತರು!
ನಡೆ ನುಡಿ ಮಡಿಯಲಿ ಶ್ರೇಷ್ಠತೆ ಮರೆದವರು!
ತ್ರಿಕಾಲ ಜ್ಞಾನದ ತ್ರಿನೇತ್ರಿಗಳು ಶ್ರೀ ಸಿದ್ದೇಶ್ವರರು! (೨)
ಪಂಚೇಂದ್ರಿಯಗಳನು ನಿಗ್ರಹಿಸಿದರು
ಪಂಚ ಭಾಷೆಯ ಪಂಡಿತರು!
ಪಂಚಾಮೃತವ ಉಣಿಸಿದರು
ಪಂಚ ಭೂತಗಳಲಿ ಲೀನರಾಗಿ ಪರಮಾತ್ಮರಾದವರು!
ಬಿಜಾಪುರದ ಶ್ರೀ ಸಿದ್ದೇಶ್ವರರು! (೩)
ರಚನೆ:- ಈರಮ್ಮ.ಪಿ.ಕುಂದಗೋಳ….