IMG-20250724-WA0025(1)

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ

  ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೆಚ್ಚ್ ,ಬಿ , ದೇಶಪಾಂಡೆ ನೇಮಕ

ಕೊಪ್ಪಳ,೨೪- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಗೆ ಮಾಜಿ ಜಿಲ್ಲಾ ಸಂಚಾಲಕ ಹಾಗೂ ಮುಖಂಡ ಹೆಚ್ಚ್ ಬಿ ದೇಶಪಾಂಡೆ ಅವರನ್ನು ರಾಜ್ಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅದ್ಯಕ್ಷ ಎಸ್. ರಘುನಾಥ್ ನೇಮಕ ಮಾಡಿದ್ದಾರೆ.

ನೇಮಕಾತಿ ಪತ್ರದಲ್ಲಿ ತಾವು ಬ್ರಾಹ್ಮಣ ಸಮುದಾಯಕ್ಕೆ ನಿಸ್ಪೃಹತೆಯಿಂದ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ (೨೦೨೫-೨೦೨೬) ಸಾಲಿನ ಒಂದು ವರ್ಷದ ಅಥವಾ ಮುಂದಿನ ಆದೇಶದವರೆಗೆ ತಮ್ಮನ್ನು ರಾಜ್ಯ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯ ರನ್ನಾಗಿ ನೇಮಿಸಿದಾಗಿ ತಿಳಿಸಿದ್ದಾರೆ.
ಮಹಾ ಸಭೆಯನ್ನು ಒಂದು ಸದೃಢ ಹಾಗೂ ಬಲಾಡ್ಯ ಸಂಸ್ಥೆಯನ್ನಾಗಿ ಮಾಡಲು ತಮ್ಮ ಅಮೂಲ್ಯ ಸೇವೆಯನ್ನು ಇಡೀ ರಾಜ್ಯದ ವಿಪ್ರ ಸಮುದಾಯಕ್ಕೆ ನೀಡುವ ಸಂಕಲ್ಪ ಮಾಡಬೇಕೆಂದು ಕೋರುತ್ತೇನೆ. ಮಹಾಸಭೆಯ ಯೋಜನೆಗಳು ಇನ್ನೂ ಹೆಚ್ಚು ವಿಪ್ರರಿಗೆ ದೊರಕುವಂತೆ ಮಾಡಬೇಕೆಂದೂ ಸುಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!