
ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಕರ್ತವ್ಯ ನಿರ್ವಹಿಸುವೆ : ಜಯಪ್ರಕಾಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,26- ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡವಲ್ಲಿ ಪೋಲಿಸರೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳ ನಿರ್ದೇಶನ ಮತ್ತು ಜನಪ್ರನಿಧಿಗಳ ಸಹಕಾರದೊಂದಿಗೆ ಕರ್ತವ್ಯ ನಿರ್ವಹಸುವುದಾಗಿ ನಗರ ಪೋಲೀಸ್ ಠಾಣೆ ನೂತನ ಆರಕ್ಷಕ ನೀರಿಕ್ಷಕ ಕೆ. ಜಯಪ್ರಕಾಶ ಹೇಳಿದರು.
ನಗರ ಪೋಲಿಸ್ ಠಾಣೆಯಲ್ಲಿ ಪತ್ರಕರ್ತರು ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಪ್ಪಳ ನಗರ ಮತ್ತು ಭಾಗ್ಯನಗರ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಅಪರಾಧಗಳ ತಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ಸಾರ್ವಜನಿಕ ರ ಸಹಕಾರ ಕೂಡ ಅಷ್ಟೇ ಪ್ರಮುಖವಾಗಿದೆ. ಎಂದರು.
ಕೆ. ಜಯಪ್ರಕಾಶ ಅವರು ಮೂಲತಃ ಪಕ್ಕದ ವಿಜಯನಗರ ಜಿಲ್ಲೆಯ ನಿವಾಸಿಯಾಗಿದ್ದು, ಕೊಪ್ಪಳ ಜಿಲ್ಲೆಯ ಮುನಿರಾಬಾದ, ಕನಕಗಿರಿ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು, ಬಳ್ಳಾರಿ ಜಿಲ್ಲೆಯ ಕುರುಗೋಡದಿಂದ ವರ್ಗಾವಣೆ ಗೊಂಡು ಕೊಪ್ಪಳ ನಗರ ದ ಪೋಲಿಸ್ ಠಾಣೆ ಗೆ ನೂತನ ಠಾಣಾಧಿಕಾರಿಯಾಗಿ ಇದೇ ತಿಂಗಳ 1ರಂದು ಅಧಿಕಾರ ವಹಿಸಿಕೊಂಡಿದ್ದಾರೆ.