IMG-20240226-WA0089

ಸೃಜನಶೀಲ ಸಾಹಿತ್ಯ ಮತ್ತು ಸ್ವಾತಂತ್ರ‍್ಯ ಹೋರಾಟ ಕಟ್ಟುವಲ್ಲಿ ಪ್ರೊ. ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ಪಾತ್ರ ಮಹತ್ವವಾದದ್ದು

ಕರುನಾಡ ಬೆಳಗು ಸುದ್ದಿ

ಕೊಪ್ಪಳ,26- ಜಿಲ್ಲೆಯ ಸುತ್ತ ಮುತ್ತ ಸೃಜನಶೀಲ ಸಾಹಿತ್ಯ ಮತ್ತು ಸ್ವಾತಂತ್ರ‍್ಯ ಹೋರಾಟ ಕಟ್ಟುವಲ್ಲಿ ಪ್ರೊ. ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ಅವರ ಪಾತ್ರ ಬಹಳ ಮಹತ್ವವಾದದ್ದು. ಇಷ್ಟು ದೊಡ್ಡ ಮೇಧಾವಿ ನಮ್ಮ ಭಾಗದಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ ಎಂದು ಕೊಪ್ಪಳದ ಕಾಳಿದಾಸ ಪದವಿ ಪರ‍್ವ ಕಾಲೇಜಿನ ಮುಖ್ಯಾಧ್ಯಾಪಕ ರಾಮಣ್ಣ ಹಾಲ್ಮೋಸರುಕೇರಿ  ಅವರು ಹೇಳಿದರು.

ನಗರದ ಸರಕಾರಿ ಪ್ರಥಮ ರ‍್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕೊಪ್ಪಳದ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಹಮ್ಮಿಕೊಂಡಿದ್ದ ಪ್ರೊ. ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ಅವರ ಜೀವನ ಸಾಹಿತ್ಯ ಹಾಗೂ ಹೋರಾಟದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.

ಪಂಚಾಕ್ಷರಿ ಹಿರೇಮಠ ಅವರು ಪ್ರಥಮ ಬಾರಿ ಕೊಪ್ಪಳ ಕೋಟೆಯಲ್ಲಿ ತ್ರಿರ‍್ಣ ಧ್ವಜಾರೋಹಣ ಮಾಡಿರುತ್ತಾರೆ. ಪ್ರೊ.ಪಂಚಾಕ್ಷರಿ ಹಿರೇಮಠ ಅವರು ಕಥೆ, ಕವನ, ಕಾದಂಬರಿಗಳನ್ನು ಬರೆದಿದ್ದಾರೆ. ಅವರು ದೇಶದ ವಿವಿಧ ಭಾಷೆಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂತಹ ಮಹಾನ್ ಸಾಧಕರ ಕುರಿತು ಇಂದಿನ ಯುವ ಜನಾಂಗ ತಿಳಿದುಕೊಳ್ಳಬೇಕು. ಇಂತಹ ಮಹಾನ ವ್ಕಕ್ತಿಗಳ ಜೀವನ ಚರಿತ್ರೆ, ಅವರ ಬದುಕು- ಬರಹಗಳನ್ನು ಅಧ್ಯಯನ ಮಾಡಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಟಾಪನೆಯ ಸದಸ್ಯರಾದ ಪ್ರೊ. ದುರ್ಗದಾಸ್ ಅವರು ಮಾತನಾಡುತ್ತ ವಿದ್ಯಾರ್ಥಿಗಳು ಬರೀ ಪುಸ್ತಕ ಓದುವುದು ಮಾತ್ರ ಮುಖ್ಯವಲ್ಲ. ಪ್ರಾಯೋಗಿಕ ಶಿಕ್ಷಣ ಕೂಡ ಮುಖ್ಯ. ಚರ್ಚಿಲ್ ಕನ್ನಡಿ ಮುಂದೆ ನಿಂತು ಭಾಷಣ ಮಾಡುವ ಕಲೆಯನ್ನು ಕಲೆತ. ಚಾರ್ಲಿ ಚಾಪ್ಲಿನ್ ಅವರ ತಾಯಿಯ ನೃತ್ಯವನ್ನು ನೋಡಿ ತಾನೂ ಕಲಿಯುತ್ತ ಸಾಕಷ್ಟು ಹೆಸರು ಮಾಡಿದಂತೆ ಬಿಸರಳ್ಳಿಯವರ ಸಾಹಿತ್ಯ ಅಧ್ಯಯನ ಮಾಡಿ ನೀವು ಸಹ ಸಾಹಿತ್ಯ ಬೆಳಸಲು ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಹಲಗೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಸುಮತಿ ಹಿರೇಮಠ ಅವರು ಪ್ರೊ. ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ರವರ ಮುಕ್ತಕಗಳ (ಕೆಳದಿ ಸಂಕಲನ) ಕುರಿತು ಮಾತನಾಡುತ್ತ ಪ್ರೊ. ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ರವರು ನಮ್ಮ ಭಾಗದ ಶ್ರೀವಿಜಯ ಇದ್ದಂತೆ. ನಾವು ಅವರ ಪುಸ್ತಕಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು. ಹಿರೆಮಠ ಅವರು ಕಾವ್ಯವನ್ನು ವಗ್ಗಿಸಿಕೋಂಡಿದ್ದರು. ಇವರ ಕುರಿತು ಹೆಚ್ಚು ಪ್ರಾಚಾರ ಆಗಿಲ್ಲ. ಇವರ ಕುರಿತು ಹೆಚ್ಚು ಅಧ್ಯಯನ ಮತ್ತು ಹೆಚ್ಚು ಸಂಶೋಧನೆ ನಡೆಯಬೇಕು. ಇವರಿಗೆ ಹೆಚ್ಚು ಗೌರವ ಮತ್ತು ಪ್ರಶಸ್ತಿಗಳು ಸಿಕ್ಕಿಲ್ಲ ಎಂದರು. ಇವರು ಸ್ವತಂತ್ರ್ಯ ಹೋರಾಟಗಾರರು ಹೌದು. ಆದರೆ ಇವರ ಕುರಿತು ಸ್ವಾತಂತ್ರ್ಯ ಹೋರಾಟದ ಚರಿತ್ರಯ ಪುಸ್ತಕಗಳಲ್ಲಿ ಹೆಸರು  ದಾಖಲಾಗಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ. ಅಲ್ಲಮ ಪ್ರಭು ಬೆಟ್ಟದೂರು ಅವರು ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ಜನರ ಮೇಲೆ ಭಾವನಾತ್ಮಕವಾಗಿ ಹೇರಬಾರದು. ಇದರಿಂದ ಜನರು ಪ್ರಶ್ನೆ ಮಾಡುವ ಮನಸ್ಥಿಯು ಕಡಿಮೆ ಆಗುತ್ತದೆ. ನಾವು ವ್ಯಕ್ತಿ ಪೂಜೆಯನ್ನು ಮಾಡಬಾರದು, ವಿದ್ಯಾರ್ಥಿಗಳಿಗೆ ರಾಜಕೀಯ ಪ್ರಜ್ಞೆ ಇರಬೇಕು. ನಮಗೆ ಮತದಾನ ಹಕ್ಕು ಇದೆ. ಓಟು ಹಾಕುವಾಗ ಜಾಗೃತೆಯಿಂದ ಮತದಾನ ಮಾಡಬೇಕು. ಪತ್ರಿಕೆಗಳನ್ನು ಮತ್ತು ಸಾಹಿತ್ಯವನ್ನು ಓದಿ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು. ಕನ್ನಡದ ಬಗ್ಗೆ ಕೆಲಸ ಮಾಡುವವರನ್ನು ನೆನೆಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ಪಂಚಾಕ್ಷರಿ ಹಿರೆಮಠ ಅವರ ಬರೆದಿರುವ ಹೇಮಂತ ಋತುವಿನ ಸ್ವರಗಳ ಪುಸ್ತಕದ ಕುರಿತು ಪವನಕುಮಾರ್ ಕಮ್ಮಾರ ಬಿಸರಳ್ಳಿ ಅವರು ಮಾತನಾಡಿದರು.

ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಳೇಜಿನ ಪ್ರಾಚಾರ್ಯ ಡಾ.ಗಣಪತಿ ಲಮಾಣಿಯವರು ಮಾತನಾಡಿದರು.

ವೇದಿಕೆಯಲ್ಲಿ ದತ್ತಿ ದಾನಿಗಳಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಬಿಸರಳ್ಳಿ, ಪ್ರೊ. ಅನ್ನದಾನಿ ಹಿರೇಮಠ ಬಿಸರಳ್ಳಿ, ಎಚ್.ಎಸ್ ಪಾಟೀಲ್, ಬಿ.ಜಿ.ಕರಿಗಾರ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!