
ಸಂಗಣ್ಣ ಮನವೊಲಿಸಲು ಸಚಿವರ ವಿಫಲ ಯತ್ನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, _07- ಕೃಷಿ ಪಂಪ್‌ಸೆಟ್ ಸೌಲಭ್ಯ ಮುಂದುವರಿಸುವಂತೆ ಒತ್ತಾಯಿಸಿ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡ ಸ್ಥಳಕ್ಕೆ ಮಂಗಳವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆಗಮಿಸಿ ಮನವೊಲಿಕೆಗೆ ವಿಫಲವಾದರು.
ಸರ್ಕಾರ ಆದೇಶ ರದ್ದು ಮಾಡುವ ವರೆಗು ಹೋರಾಟ ಕೈಬಿಡುವುದಿಲ್ಲಾ ಎಂದು ಸಂಸದರು ಸ್ಪಷ್ಟ ಪಡಿಸಿದರು.
ಈ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, 500 ಮೀಟರ್ ವರೆಗೆ ಉಚಿತವಾಗಿ ವಿದ್ಯುತ್ ಕಂಬ ಹಾಗೂ ತಂತಿ ನೀಡುತ್ತೇವೆ. ಜಿಲ್ಲೆಯಲ್ಲಿ 273 ಅಕ್ರಮ ಪಂಪ್ ಸೆಟ್ ಗಳಿವೆ. ಅವುಗಳನ್ನು ಸಕ್ರಮ ಮಾಡುತ್ತೇವೆ.
ಉಚಿತ ಮಾಡುತ್ತೇವೆ ; ಆದೇಶದಲ್ಲಿ ಹೊಸ ಪಂಪ್‌ಸೆಟ್ ಗಳಿಗೆ ರೈತರೇ ದುಡ್ಡು ಭರಿಸಬೇಕೆಂಬ ಆದೇಶ ತಿದ್ದುಪಡಿ ಮಾಡುತ್ತೇವೆ. ಈ ಬಗ್ಗೆ ಇಂಧನ ಸಚಿವ ಹಾಗೂ ಇಲಾಖೆ ಕಾರ್ಯದರ್ಶಿಯೊಂದಿಗೆ ಮಾತನಾಡಿರುವೆ.
ನೂತನ ಆದೇಶ ; 15ದಿನದಲ್ಲಿ ಆದೇಶ ಹೊರ ಬೀಳಲಿದೆ. ನೀವು ನಿರಶನ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.ಸಚಿವ ಬೈರೇಗೌಡ ಸಹ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದರು.
ಸರಕಾರ ಆದೇಶ ವಾಪಸ್ ಪಡೆಯುವ ಬಗ್ಗೆ ಮರು ಆದೇಶ ಮಾಡುವವರೆಗೆ ನಿರಶನ ವಾಪಸ್ ಪಡೆಯುವುದಿಲ್ಲ ಎಂದು ಸಂಗಣ್ಣ ಪಟ್ಟು ಮುಂದುವರೆಸಿದರು.