
ಸರ್ಕಾರಿ ಪ್ರೌಢಶಾಲೆಗೆ ಡಿಡಿಪಿಐ ಉಮಾದೇವಿ ಭೇಟಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,31- ತಾಲೂಕಿನ ಸಿರಿಗೇರಿ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಬಳ್ಳಾರಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕಿ ಉಮಾದೇವಿ ಭೇಟಿ ನೀಡಿದರು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸರಣಿ ಪರೀಕ್ಷೆ ವೀಕ್ಷಿಸಿದರು ಮಕ್ಕಳನ್ನು ಮಾತನಾಡಿಸಿ ನಿತ್ಯ ಅಭ್ಯಾಸ ಮಾಡಿ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕು ಎಂದು ಅವರು ಸಲಹೆ ನೀಡಿದರು ಮುಖ್ಯ ಶಿಕ್ಷಕ ಓಂಕಾರ ಗೌಡ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಮೂರ್ತಿ ಶಿವಲೀಲಾ ನಬಿಸಾಬ್ ಇದ್ದರು.