WhatsApp Image 2024-01-31 at 1.52.37 PM

ಉತ್ತಮ ವಾತಾವರಣದಿಂದ ಸ್ವಸ್ತ ಸಮಾಜ ನಿರ್ಮಾಣ ಸಾಧ್ಯವಿದೆ : ನ್ಯಾಯಾದೀಶ ವಿಜಯಕುಮಾರ ಕೊಣ್ಣೂರು

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,31-  ನಾವು ವಾಸಿಸುವ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿರಬೇಕು. ಉತ್ತಮ ವಾತಾವರಣದಿಂದ ಸ್ವಸ್ತ ಸಮಾಜ ನಿರ್ಮಾಣ ಸಾಧ್ಯವಿದೆ. ಸಮಾಜದಲ್ಲಿ ಸ್ವಾಸ್ಥ ಮತ್ತು ಸುಂದರ ಪರಿಸರ ನಿರ್ಮಾಣವಾದಾಗ ಮಾತ್ರ ಆರೋಗ್ಯವಂತ ಜೀವನ ನಡೆಸಲು ಸಾಧ್ಯ,. ಪ್ರತಿಯೊಬ್ಬರು ಸಕ್ರಿಯವಾಗಿ ಸ್ವಚ್ಚೆತೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಒಳ್ಳೆಯ ಪರಿಸರಕ್ಕೆ ಕೈ ಜೋಡಿಸಬೇಕು ಎಂದು ಹಿರಿಯ ಶ್ರೆಣಿ ನ್ಯಾಯಾದೀಶ ವಿಜಯಕುಮಾರ ಕೊಣ್ಣೂರು ಹೇಳಿದರು.

ರಾಷ್ಟ್ರೀಯ ಸ್ವಚ್ಚಾತಾ ದಿನಾಚರಣೆಯಪ್ರಯುಕ್ತ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸ್ವಚ್ಚತಾ ಕುರಿತು ಜಾಗೃತಿ ಕರ‍್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಮುದಾಯ ಆರೋಗ್ಯ ಹಾಗೂ ವೈಯಕ್ತಿಕವಾಗಿ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಗಿಡ-ಮರಗಳ ಪೋಷಿಸಿ ಅವುಗಳನ್ನು ರಕ್ಷಣೆ ಮಾಡುವುದರಿಂದÀ ಶುದ್ದವಾದ ಗಾಳಿ ಪಡೆಯಲು ಸಾಧ್ಯ. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚೆತೆಯಿಂದ ಕಾಪಾಡಿಕೊಳ್ಳಬೇಕು. ಎಂದರು.

ಹೆಚ್ಚುವರಿ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ಪಪಂ ಮುಖ್ಯಾಧಿಕಾರಿ ನಾಗೇಶ , ವಕೀಲರಾದ ಎಸ್.ಎನ್. ಶ್ಯಾಗೋಟಿ, ಕೆ.ಆರ್. ಬೇಟಗೇರಿ, ಎ.ಎಂ. ಶಂಕರಗೌಡ, ಎಚ್.ಎಚ್. ಹಿರೇಮನಿ, ಜಿ.ಕೆ ಲಾಲಗೊಂಡರ್, ದಾದು ಎಲಿಗಾರ, ಭರಮಗೌಡ್ರ, ನಾಗರಾಜ, ಎಸ್.ವಿ ಶಶಿಮಠ, ಎ.ಎಂ ಪಾಟೀಲ್, ಶಶಿಧರ ಶ್ಯಾಗೋಟಿ, ಎಚ್,ಎ ನಡುವಲಮನಿ, ಮಂಜುನಾಥ, ಡಿ,ಎಚ್ ನದಾಫ್, ಆರ್, ಜಿ ಕುಷ್ಟಗಿ ಶೆಟ್ಟರ್ ಮತ್ತು ಇತರರು ನ್ಯಾಯಾಂಗ ಇಲಾಖೆ ಹಾಗೂ ಪಪಂ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!