ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ಕಲಬುರಗಿಗೆ ಸ್ಥಳಾಂತರ

ಕರುನಾಡ ಬೆಳಗು ಸುದ್ದಿ
ಕೊಪ್ಪಳ , ೦೨- ರಾಯಚೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿಯನ್ನು ರಾಜ್ಯ ಸರ್ಕಾರದ ಆದೇಶದಂತೆ ಪ್ರಾಂತದ ಕೇಂದ್ರ ಸ್ಥಾನ ಕಲಬುರಗಿಗೆ ಸ್ಥಳಾಂತರಿಸಲಾಗಿದ್ದು, ಕಚೇರಿಯು ಕಲಬುರಗಿ ಕೇಂದ್ರ ಸ್ಥಾನದಲ್ಲಿ ಜನವರಿ 01 ರಿಂದ ಕಾರ್ಯಾರಂಭಗೊಂಡಿದೆ.
ಆದ್ದರಿಂದ ಸಂಬಂಧಿಸಿದ ಸಹಕಾರ ಸಂಘಗಳು ಮತ್ತು ಸಾರ್ವಜನಿಕರು ಇನ್ನು ಮುಂದೆ ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿ, ಕಲಬುರಗಿ ಪ್ರಾಂತ , ಕಲಬುರಗಿ ರತ್ನ ಆರ್ಕೇಡ್ ಕಟ್ಟಡ, ಕುಮಸಿ ಹೋಟೇಲ್ ಎದುರುಗಡೆ, ಎ.ಪಿ.ಎಂ.ಸಿ ಮೇನ್ ಗೇಟ್ ಹತ್ತಿರ, ನೆಹರು ಗಂಜ್, ಕಲಬುರಗಿ-585104 ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಸಹಕಾರ ಸಂಘಗಳ ಉಪನಿಬಂಧಕರಾದ ದಸ್ತಗೀರ ಅಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!