8f07695d-18e2-4b48-a6dd-a4478e7e743a

ಕೊಪ್ಪಳ ರೈಲ್ವೆ ಗೇಟ್ 63 ಕೆಳ ಸೇತುವೆ ಕಾಮಗಾರಿ ವಿಳಂಭ ಖಂಡಿಸಿ

ಶಾಸಕರ ಮನೆಯ ಮುಂದೆ ಧರಣಿ

ಸೆ,೨೫ರ ಹೋರಾಟಕ್ಕೆ ಮಹಿಳಾ ಸಂಘಟನೆಗಳ ಸಂಪೂರ್ಣ ಬೆಂಬಲ

 

ಕರುನಾಡ  ಬೆಳಗು ಸುದ್ದಿ

ಕೊಪ್ಪಳ, 20-  ಭಾಗ್ಯನಗರ ರೈಲ್ವೆ ಗೇಟ್ ನಂಬರ್ 63 ಕೆಳ ಸೇತುವೆ ನಿರ್ಮಾಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸರುವುದರಿಂದ ಹಾಗೂ ಅಡ್ಡಾಡಲಿಕ್ಕೆ ರೈಲ್ವೆ ಇಲಾಖೆಯವರು ತಡೆ ಹಾಕಿರುವುದರಿಂದ, ಈ ರಸ್ತೆಯ ಮೂಲಕ ಸಂಚರಿಸುವ ಜನರಿಗೆ, ವಿಧ್ಯಾರ್ಥಿಗಳಿಗೆ ಅದರಲ್ಲೂ ಮಹಿಳೆಯರಿಗೆ ಬಹಳಷ್ಟು ತೊಂದರೆಯಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಹೀಗಾಗಿ ರೈಲ್ವೆ ಗೇಟ್ ನಂಬರ್ 63 ಹೋರಾಟ ಸಮಿತಿಯು ಇದೆ ಸೆ, 25 ರಂದು ಹೋರಾಟವನ್ನು ಹಮ್ಮಿಕೊಂಡಿದ್ದು, ಈ ಹೋರಾಟವನ್ನು ಬೆಂಬಲಿಸಿ ಮಹಿಳೆಯರು ಸಹ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

ಕೊಪ್ಪಳ ನಗರದ ಗೇಟ್ ನಂಬರ್ 63 ಇದರ ಕೆಳ ಸೇತುವೆ ನಿರ್ಮಾಣ ಕಾಮಗಾರಿಯು ಅರ್ಧಕ್ಕೆ ನಿಂತು ಇಂದಿಗೆ ಸುಮಾರು 8 ವರ್ಷಗಳಾಗಿವೆ. ಇದನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಕೊಪ್ಪಳದ ಶಾಸಕರು, ಸಂಸದರು ಹಾಗೂ ಜಿಲ್ಲಾಡಳಿತಕ್ಕೆ ಹೋರಾಟ ಸಮಿತಿಯು ಹಲವಾರು ಬಾರಿ ಮನವಿಯನ್ನು ಸಲ್ಲಿಸಿದರೂ, ಯಾರು ನಮ್ಮ ಮನವಿಗೆ ಇದುವರೆಗೂ ಸ್ಪಂದಿಸದಿರುವುದರಿಂದ, ಇದೆ ದಿನಾಂಕ 25. 09. 2025ರ ಬೆಳಿಗ್ಗೆ 11ಕ್ಕೆ ಸ್ವಾಮಿ ವಿವೇಕಾನಂದ ಶಾಲೆಯ ಹತ್ತಿರದಿಂದ ಪ್ಪತಿಭಟನೆಯು ಹೊರಟು ಬಿ ಟಿ ಪಾಟೀಲ ನಗರದಲ್ಲಿರುವ ಶಾಸಕರ ಮನೆಯ ಮುಂದೆ ಧರಣಿ ನಡೆಸಲು ಸಮಿತಿಯು ನಿರ್ಧರಿಸಿದೆ.

ಬಹು ದಿನಗಳ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯತನಕ್ಕೆ ಬೆಸರಿಸಿಕೊಂಡಿರುವ ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಮುಂದೆ ನಡೆವ ಹೋರಾಟದಲ್ಲಿ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಈಗಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೇಗ ಎಚ್ಚೆತ್ತುಕೊಂಡು ಕೆಳ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಮಹಿಳಾ ಸಂಘಟನೆಯ ಮುಖಂಡರಾದ ಗೀತಾ ಪಾಟೀಲ, ಸವಿತಾ ಬನ್ನಿಕೊಪ್ಪ, ಪಾರ್ವತಿ ಹಿರೇಮಠ, ಗಂಗು ಮೇಳಿ, ಗೀತಾ ಹೊಸಬಾವಿ , ಜ್ಯೋತಿ ಪುರೋಹಿತ, ನಾಗಮ್ಮ ತೋಟದ, ರೇಖಾ ದೇಸಾಯಿ, ಪುಷ್ಪಾ, ಶೋಭಾ ಮುಂತಾದವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!