ಕಲೆ ಮತ್ತು ವಾಸ್ತು ಶಿಲ್ಪಕ್ಕೆ
ವಿಶ್ವಕರ್ಮರ ಕೊಡುಗೆ ಅಪಾರ- ವಿಶ್ವನಾಥ ಮರಿಬಸಪ್ಪನವರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ-19 ಇಡೀ ವಿಶ್ವವನ್ನೇ ಸೃಷ್ಟಿ ಮಾಡಿದ್ದು ಈಶ್ವರ ಆದರೆ ದೇವಲೋಕದಲ್ಲಿ ಸ್ವರ್ಗವನ್ನು ಸೃಷ್ಟಿ ಮಾಡಿದ್ದು ವಿಶ್ವಕರ್ಮ ಹಾಗಾಗಿ ಪುರಾಣ ಕಾಲದಿಂದಲೂ ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮದ ಕೊಡುಗೆ ಅಪಾರವಾಗಿದೆ ಎಂದು ಯಲಬುರ್ಗಾ ಮಾಜಿ ತಾಲೂಕು ಪಂಚಾಯತಿ ಉಪಾಧ್ಯಕ್ಷರಾದ ವಿಶ್ವನಾಥ ಮರಿಬಸಪ್ಪನವರ ಹೇಳಿದರು.
ಅವರು ಮಂಗಳೂರು ಗ್ರಾಮದ ಶ್ರೀ ಕಾಳಿಕಾದೇವಿ ಬಡಗಿತನ ಕಸುಬುದಾರರ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ಕುಕನೂರು ತಾಲೂಕ ವಿಶ್ವಕರ್ಮ ಸಮಾಜ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕೊಪ್ಪಳ ಜಿಲ್ಲಾ ಘಟಕ ಮತ್ತು ಮಂಗಳೂರು ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಕುಕನೂರು ತಾಲೂಕು ಮಟ್ಟದ ಶ್ರೀ ವಿರಾಟ ವಿಶ್ವಕರ್ಮ ಜಯಂತೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು ಹಿಂದೂ ಪುರಾಣಗಳಲ್ಲಿ ಭಗವಾನ ವಿಶ್ವಕರ್ಮನನ್ನು ಸ್ವರ್ಗ ಮತ್ತು ಭೂಮಿಯನ್ನು ಸೃಷ್ಟಿಸಿದ ದೈವಿಕ ವಾಸ್ತುಶಿಲ್ಪಿ ಎಂದು ಪೂಜಿಸಲಾಗುತ್ತದೆ ದೇವರುಗಳ ಅರಮನೆಗಳು ವಿವಿಧ ದೈವಿಕ ಆಯುಧಗಳು ಮತ್ತು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಅನೇಕ ಮಹತ್ವದ ವಾಸ್ತುಶಿಲ್ಪದ ಅದ್ಭುತಗಳನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅವರ ದ್ವಾರಕಾ ಮತ್ತು ಹಸ್ತಿನಾಪುರದ ಪೌರಾಣಿಕ ನಗರಗಳು ಹಾಗೂ ದೇವರುಗಳ ಪೌರಾಣಿಕ ಹಾರುವ ರಥಗಳು ವಿಶ್ವಕರ್ಮರ ಸೃಷ್ಟಿಗಳಾಗಿವೆ ಎಂದು ಹೇಳಿದರು.
ನಮ್ಮ ಮಂಗಳೂರು ಗ್ರಾಮದ ವಿಶ್ವಕರ್ಮ ಸಮಾಜದವರು ಎಲ್ಲಾ ಸಮಾಜದವರೊಂದಿಗೆ ಸಹೋದರತ್ವದಿಂದ ಕೂಡಿಕೊಂಡು ಹೋಗುವ ಗುಣ ಉಳ್ಳವರು ಎಂದು ಹೇಳಿದರು ಕೇವಲ 04 ದಿನದಲ್ಲಿ ಇಂತಹ ಅಚ್ಚುಕಟ್ಟಾದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಆಯೋಜನೆ ಮಾಡಿ ಎಲ್ಲಾ ಜಾತಿ ವರ್ಗದವರನ್ನು ಸೇರಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಜಯಂತಿಯನ್ನು ಆಚರಣೆ ಮಾಡಿದರು ಮುಂದಿನ ದಿನಗಳಲ್ಲಿ ಮಂಗಳೂರು ಮಡಿಗೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಮೆರವಣಿಗೆಯಲ್ಲಿ ನಮ್ಮ ಊರಿನ ಕಲೆ ರಾಜ್ಯದಲ್ಲಿ ಪ್ರಖ್ಯಾತಿ ಪಡೆಯಲಿ ಎಂದು ವೇದಿಕೆಯಲ್ಲಿ ಇದ್ದ ನಾಡ ಉಪ ತಹಸೀಲ್ದಾರ್ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಕಳಕಪ್ಪ ಕಂಬಳಿ ಮಾಜಿ ಉಪಾಧ್ಯಕ್ಷರು ತಾಲೂಕು ಪಂಚಾಯತ ಯಲಬುರ್ಗಾ ಮಾತನಾಡಿ ವಿಶ್ವಕರ್ಮ ಸಮಾಜದವರು ಕಾಯಕಯೋಗಿಗಳು ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮಾಜದವರು ಶೈಕ್ಷಣಿಕವಾಗಿ ರಾಜಕೀಯವಾಗಿ ಬೆಳೆಯಬೇಕು ಎಂದರು ಇಂದಿನ ಯುವಕರು ದುಷ್ಟ ಚಟಕ್ಕೆ ಬಲಿಯಾಗದೆ ನಿಮ್ಮ ತಂದೆ ತಾಯಿಯವರನ್ನು ನೋಡಿಕೊಳ್ಳಬೇಕು ಮತ್ತು ಬೇರೆ ಬೇರೆ ಉದ್ಯೋಗದಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು ಎಲ್ಲಾ ಸಮಾಜದವರೊಂದಿಗೆ ಒಗ್ಗಟ್ಟಾಗಿ ಇರಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಮಲ್ಲನಗೌಡ್ರ ಕೋನನಗೌಡ್ರ ಜೆಡಿಎಸ್ ಜಿಲ್ಲಾ ವಕ್ತಾರರು ಮಾತನಾಡಿ ವಿಶ್ವಕರ್ಮ ಜಯಂತಿಯನ್ನು ಇಡೀ ವಿಶ್ವದಲ್ಲೇ ಇರುವ ಪ್ರತಿಯೊಬ್ಬರು ಈ ಜಯಂತ್ಯನ್ನು ಆಚರಣೆ ಮಾಡಬೇಕು ಎಂದರು ವಿಶ್ವಕರ್ಮ ಸಮಾಜದವರು ಯಾವುದೇ ತಂಟೆ ತಕರಾರಿಗೆ ಹೋಗದೆ ತಮ್ಮ ಕಾಯಕದಲ್ಲಿ ತಮ್ಮನ್ನೇ ತೊಡಗಿಸಿಕೊಳ್ಳುವರು ಎಂದು ಹೇಳಿದರು. ಇಡೀ ವಿಶ್ವಕ್ಕೆ ಬೆಳಕು ನೀಡುವ ವಿಶ್ವಕರ್ಮ ಸಮಾಜದವರು ಎಂದರು ಒಂದು ಕಲ್ಲನ್ನು ಮೃದು ಮಾಡಿ ಅದಕ್ಕೆ ಒಂದು ರೂಪ ನೀಡುವರು ವಿಶ್ವಕರ್ಮರು ಅಂತ ಅನೇಕ ಕೆತ್ತನೆಗಳನ್ನು ನಾವು ಭಾರತಾದ್ಯಂತ ಕಾಣಬಹುದಾಗಿದೆ ಎಂದು ಹೇಳಿದರು.
ಪೂಜ್ಯಶ್ರೀ ನಾಗಲಿಂಗ ಮಹಾಸ್ವಾಮಿಗಳು ಗಿಣಗೇರಿ ಮಾತನಾಡಿ ನಾವು ಇಲ್ಲಿ ಕೂತು ಮಾತನಾಡುತ್ತಿದ್ದೇವೆ ಎಂದರೆ ವಿಶ್ವಕರ್ಮರ ಪಾತ್ರ ಬಹಳಷ್ಟು ಅಗಾಧವಾಗಿದೆ ಈ ಜಗತ್ತು ಸುಂದರವಾಗಿ ಕಾಣಲು ನಾವು ಯಾವುದೇ ಕಟ್ಟಡದ ವಾಸ್ತು ಶಿಲ್ಪವನ್ನು ನೋಡಿದಾಗ ಅದು ನಮ್ಮ ಕಣ್ಮನ ಸೆಳೆಯುತ್ತದೆ ಅದಕ್ಕೆ ವಿಶ್ವಕರ್ಮರ ಕೊಡುಗೆ ಸಾಧನೆಯನ್ನು ನಾವೆಲ್ಲರೂ ಮನಗಾಣಬೇಕು ಎಂದರು.
ಪ್ರಕಾಶ ಬಡಿಗೇರ ಮಂಗಳೂರು ಪ್ರಾಸ್ತಾವಿಕ ಮಾತನಾಡಿ ವಿಶ್ವಕರ್ಮ ಜಯಂತಿ 2016ರಲ್ಲಿ ನಮ್ಮ ರಾಜ್ಯದಲ್ಲಿ ಜಾರಿಗೆ ಬಂತು ಪ್ರತಿ ಗ್ರಾಮ ಹೋಬಳಿಗಳಲ್ಲಿ ಈ ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ ನಮ್ಮ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷರಾದ ಕೆ ಪಿ ನಂಜುಂಡಿ ಅವರ ಶ್ರಮದಿಂದ 2016ರಲ್ಲಿ ವಿಶ್ವಕರ್ಮ ಜಯಂತಿಯನ್ನು ರಾಜ್ಯಾದ್ಯಂತ ಆಚರಣೆ ಮಾಡಲು ಕರ್ನಾಟಕ ಸರ್ಕಾರ ಆದೇಶ ಮಾಡಿತು ಎಂದು ಹೇಳಿದರು.
ಅಜಯಕುಮಾರ ಜಡಿಯವರ ಶಿಕ್ಷಕರು ಶ್ರೀ ವಿಶ್ವಕರ್ಮರ ಜಯಂತಿಯ ಕುರಿತು ವಿಶೇಷ ಉಪನ್ಯಾಸ ನೀಡಿ ವಿಶ್ವಕರ್ಮ ಅನ್ನುವುದು ವಿಶ್ವದ ಕರ್ಮವನ್ನೇ ಕರುಣಿಸುವುದೇ ವಿಶ್ವಕರ್ಮ ಎಂದು ಹೇಳಿದರು ದೇವತೆಗಳಲ್ಲಿ ಪೂಜ್ಯನಾದ ಬ್ರಹ್ಮನ ಮರಿ ಮಗ ಬ್ರಹ್ಮಾತ್ಮನಾದ ವಾಸ್ತುದೇವನ ಮಗನೇ ವಿಶ್ವಕರ್ಮ ಎಂದು ಅನೇಕ ಪುರಾಣ ಶಾಸ್ತ್ರಗಳು ಹೇಳುತ್ತವೆ ಅಂತಹ ವಿಶ್ವಕರ್ಮನ ವಂಶಕ್ಕೆ ಸೇರಿದವರು ನಾವುಗಳು ಪುಣ್ಯವಂತರು ಎಂದು ಹೇಳಿದರು.
ಪೂಜ್ಯಶ್ರೀ ನಾಗಮೂರ್ತೆಂದ್ರ ಮಹಾಸ್ವಾಮಿಗಳು ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಲೇಬಗೇರಿ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಬಸವರಾಜ ನಾಡ ಉಪ ತಸಿಲ್ದಾರರು ಮಂಗಳೂರು, ಸಕ್ರಪ್ಪ ಮಂಗಳಪ್ಪ ಚಿನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಮಾನಮ್ಮ ಕಮ್ಮಾರ ಗ್ರಾಮ ಪಂಚಾಯತಿ ಸದಸ್ಯರು, ಡಾ. ಸಿ. ಎಮ್. ಹಿರೇಮಠ, ಈರೇಶಪ್ಪ ಉಪನ್ಯಾಸಕರು,ರವಿ.ಡಿ. ಮಳಗಿ ಸಿಆರ್ ಪಿ, ದೇವೇಂದ್ರಪ್ಪ ಡಿ. ಬಡಿಗೇರ ರಾಜೂರು, ಅಶೋಕ ಪತ್ತಾರ, ಅಮರೇಶಪ್ಪ ಪತ್ತಾರ, ಗಂಗಾಧರ ಡಿ. ಬಡಿಗೇರ, ಶೇಖರಗೌಡ್ರ ಮಾಲಿಪಾಟೀಲ, ಅಬ್ದುಲಸಾಬ ಕಾಲಿಮಿರ್ಚಿ, ಈಶಪ್ಪ ನರಸಾಪುರ, ಮೌನೇಶ ಕಮ್ಮಾರ ಮಸಬಹಂಚಿನಾಳ, ಕೆಂಚರಡ್ಡಿ ಅರಕೇರಿ ಶಿರೂರು,ಪ್ರಕಾಶ ಚಿನ್ನೂರು.
ಮೌನೇಶ ಪತ್ತಾರ, ಆನಂದ ವಿರುಪಾಕ್ಷಪ್ಪ ಬಡಿಗೇರ,ನಾರಾಯಣಪ್ಪ ಕಮ್ಮಾರ, ಆನಂದ ಡಿ. ಬಡಿಗೇರ, ಕಾಳಪ್ಪ ಡಿ. ಬಡಿಗೇರ, ವಿರೇಶ ಕಮ್ಮಾರ. ಮೌನೇಶ. ಬಡಿಗೇರ, ಮಂಜುನಾಥ. ಪ್ರಕಾಶ ಬಡಿಗೇರ, ಮೋಹನ ಪ್ರಕಾಶ ಬಡಿಗೇರ ವಕೀಲರು ಸ್ವಾಗತ ನಿರೂಪಣೆ ಮಾಡಿದರು, ಕೊನೆಗೆ ವಿಷ್ಣು ಕಾಳಪ್ಪ ಬಡಿಗೇರ ಆಭಾರ ಮನ್ನಿಸಿದರು.ಬೆಳಿಗ್ಗೆ ಮಂಗಳೂರು ಗ್ರಾಮದ ರಾಜ ಬೀದಿಗಳಲ್ಲಿ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ ಅತ್ಯಂತ ಯಶಸ್ವಿಯಾಗಿ ಜರುಗಿತು ಕಾರ್ಯಕ್ರಮದ ನಂತರ ಅಚ್ಚುಕಟ್ಟಾದ ಪ್ರಸಾದದ ವ್ಯವಸ್ಥೆಯನ್ನು ಮಂಗಳೂರು ಗ್ರಾಮದ ವಿಶ್ವಕರ್ಮ ಸಮಾಜದವರು ಮಾಡಿದರು.
