IMG-20231127-WA0039

              ಗಂಗಾವತಿ ನಗರ ತಂಡ ವಿಭಾಗದಲ್ಲಿ ಚಾಂಪಿಯನ್ಸ್

                ಸೋಲನ್ನು  ಸಕಾರಾತ್ಮಕವಾಗಿ               ಸ್ವೀಕರಿಸಿ
             ಐಜಿಪಿ ಲೋಕೇಶ ಕುಮಾರ ಕರೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 27-  ಭಾರತ ಆಷ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿತು. ಈ ಸೋಲನ್ನು ಭಾರತದ ಜನರು ಸಕಾರಾತ್ಮಕವಾಗಿ ಸ್ವೀಕರಿಸಿದರು ಜೀವನದಲ್ಲೂ ಕೂಡಾ ನಿರಂತರವಾಗಿ ಗೆಲುವು ಸಿಗುವುದಿಲ್ಲ. ಬದಲಿಗೆ ಸೋಲುಗಳನ್ನು ಕೂಡಾ ಅನುಭವಿಸಬೇಕಾಗುತ್ತದೆ. ಆದರೆ ಸೋಲನ್ನು ಸಕಾರಾತ್ಮಕವಾಗಿ ಸ್ವೀರಿಸಬೇಕು ಎಂದು   ಬಳ್ಳಾರಿ ವಲಯದ ಐಜಿಪಿ ಲೋಕೇಶ ಕುಮಾರ ಕರೆ ನೀಡಿದರು.

ಅವರು ಕೊಪ್ಪಳದಲ್ಲಿ  ಕಳೆದ ಮೂರು ದಿನಗಳ ಕಾಲ ನಗರದಲ್ಲಿ ನಡೆದ ಪೊಲೀಸರ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಾರೋಪ ನುಡಿಗಳನ್ನಾಡಿದರು.

ಕ್ರೀಡಾಸ್ಫೂರ್ತಿ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದೆ. ಯಾವುದೇ ರೀತಿಯಲ್ಲಿ ಕಾಟಚಾರಕ್ಕೆ ಸ್ಪರ್ಧೆ ಮಾಡದೇ, ಶಿಸ್ತು ಬದ್ಧವಾಗಿ, ಶ್ರದ್ಧೆಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿ. ನಮ್ಮ ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುತ್ತೇವೆ. ಇಂತಹ ಕ್ರೀಡಾಕೂಟದಿಂದ ಒತ್ತಡ ನಿವಾರಣೆ ಆಗಲಿದೆ. ದೈನಂದಿನ ಕರ್ತವ್ಯಗಳ ನಿರ್ವಹಣೆಯಲ್ಲಿ ಹೆಚ್ಚು ಉತ್ಸಾಹ ಬರಲಿದೆ ಎಂದರು ಕರೆ ನೀಡಿದರು.

ಚಾಂಪಿಯನ್ಸ್ : ಕೊಪ್ಪಳದಲ್ಲಿ  ಕಳೆದ ಮೂರು ದಿನಗಳ ಕಾಲ ನಗರದಲ್ಲಿ ನಡೆದ ಪೊಲೀಸರ ವಾರ್ಷಿಕ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ಕೊಪ್ಪಳ ನಗರ ಮತ್ತು ಗಂಗಾವತಿ ನಗರ ಠಾಣೆ ತಂಡಗಳು ತಂಡ ವಿಭಾಗದಲ್ಲಿ ಚಾಂಪಿಯನ್ಸ್ ಗೌರವ ಪಡೆದುಕೊಂಡಿತು.

ಜಿಲ್ಲೆಯ ಗಂಗಾವತಿ ನಗರ ಠಾಣೆಯ ಸಿಪಿಸಿ ದುರುಗಪ್ಪ ವೈಯಕ್ತಿಕ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕ್ರೀಡಾಕೂಟದ ಮೂರೂ ದಿನ ಮೈದಾನದಲ್ಲಿದ್ದುಕೊಂಡು ತಮ್ಮ ಸಿಬ್ಬಂದಿ ಕ್ರೀಡಾ ಉತ್ಸಾಹಕ್ಕೆ ಹುಮ್ಮಸ್ಸು ತುಂಬಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಐದು ಕ್ರೀಡೆಗಳಲ್ಲಿ ಪ್ರಶಸ್ತಿ ಗೆದ್ದರು.

ಶಟಲ್‌ ಬ್ಯಾಡ್ಮಿಂಟನ್‌ ಡಬಲ್ಸ್‌, ಟೆನಿಸ್‌ನ ಸಿಂಗಲ್ಸ್‌ ಹಾಗೂ ಡಬಲ್ಸ್‌ ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಎಸ್‌.ಪಿ., 9 ಎಂ.ಎಂ. ಪಿಸ್ತೂಲ್‌ ಟಾರ್ಗೆಟ್‌ (ದ್ವಿತೀಯ), 303 ರೈಫಲ್‌ ಟಾರ್ಗೆಟ್‌ ಗುರಿ (ತೃತೀಯ) ಸ್ಥಾನ ಪಡೆದರು.

ಡಿಎಆರ್‌ ಘಟಕದ ಡಿಎಸ್‌ಪಿ ನಿಂಗಪ್ಪ ಎನ್‌. ಮೂರು ಸ್ಪರ್ಧೆಗಳಲ್ಲಿ ಪ್ರಥಮ, ಐದು ಸ್ಪರ್ಧೆಗಳಲ್ಲಿ ದ್ವಿತೀಯ ಹಾಗೂ ಚಕ್ರ ಎಸೆತದಲ್ಲಿ ತೃತೀಯ ಸ್ಥಾನ ಗಳಿಸಿದರು. ಗಂಗಾವತಿ ಉಪವಿಭಾಗದ ಡಿಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಎರಡು ಪ್ರಥಮ, ನಾಲ್ಕು ದ್ವಿತೀಯ ಹಾಗೂ ಮೂರು ಸ್ಪರ್ಧೆಯಲ್ಲಿ ತೃತೀಯ, ಕೊಪ್ಪಳ ಉಪ ವಿಭಾಗದ ಡಿಎಸ್‌ಪಿ ಶರಣಬಸಪ್ಪ ಎಚ್‌. ಸುಬೇದಾರ ನಾಲ್ಕರಲ್ಲಿ ಪ್ರಥಮ, ಎರಡರಲ್ಲಿ ದ್ವಿತೀಯ ಹಾಗೂ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಸಂಪಾದಿಸಿದರು.ತಂಡ ವಿಭಾಗದ ಸ್ಪರ್ಧೆಗಳ ವಾಲಿಬಾಲ್‌ನ ಪುರುಷರ ವಿಭಾಗದಲ್ಲಿ ಕೊಪ್ಪಳ ಡಿಎಆರ್‌ ಘಟಕ, ಮಹಿಳಾ ವಿಭಾಗದಲ್ಲಿ ಗಂಗಾವತಿ ಉಪ ವಿಭಾಗ ಪ್ರಥಮ ಸ್ಥಾನ ಪಡೆಯಿತು. ಪುರುಷರ ಹಗ್ಗಜಗ್ಗಾಟದಲ್ಲಿ ಕೊಪ್ಪಳ ಡಿಎಆರ್‌ ತಂಡ, ಮಹಿಳಾ ವಿಭಾಗದಲ್ಲಿ ಕೊಪ್ಪಳ ಉಪವಿಭಾಗ ತಂಡದವರು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಎಸ್‌ಪಿ, ಡಿವೈಎಸ್‌ಪಿ, ಪಿಎಸ್‌ಐ ಹಾಗೂ ಸಿಬ್ಬಂದಿ ಹೀಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ಸಾಧಕರಿಗೆ ಇಲ್ಲಿನ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ಸಮಾರೋಪದಲ್ಲಿ ಬಳ್ಳಾರಿ ವಲಯದ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್ ಮತ್ತು ಎಸ್‌ಪಿ ಯಶೋಧಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

Leave a Reply

Your email address will not be published. Required fields are marked *

error: Content is protected !!